ಕರ್ನಾಟಕ

karnataka

ಕ್ಯಾಟ್​ ಫಿಶ್​ ಪ್ರಕರಣ: ಅಧಿಕಾರಿಗಳೇ ಅಕ್ರಮ ದಂಧೆಯಲ್ಲಿ ಪಾಲ್ಗೊಂಡಿದ್ದಾರಾ..?

By

Published : Aug 21, 2019, 12:45 AM IST

ಅಕ್ರಮ ಕ್ಯಾಟ್​ ಫಿಶ್ ದಂಧೆಗೆ ಅಧಿಕಾರಿಗಳೆ ಬೆಂಬಲವಾಗಿದ್ದಾರಾ ಎಂಬ ಅನುಮಾನಕ್ಕೆ ಪುಷ್ಟಿ ನೀಡುವಂತೆ ಜಿಲ್ಲಾ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ದಾಳಿ ನಡೆಸಿದ ಮೀನುಗಾರಿಕಾ ಇಲಾಖೆ ಅಧಿಕಾರಿಗಳು

ಮಂಡ್ಯ: ಜಿಲ್ಲೆಯಲ್ಲಿ ಕ್ಯಾಟ್ ಫಿಶ್ ದಂಧೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೀನುಗಾರಿಕೆ ಇಲಾಖೆ ಸಹಾಯಕ ಉಪನಿರ್ದೇಶಕರು ಪೊಲೀಸ್ ಸಿಬ್ಬಂದಿ ಸಮೇತ ದಾಳಿ ಮಾಡಿದರೂ ಮೀನುಗಳ ನಾಶ ಅಥವಾ ವಶಕ್ಕೆ ಪಡೆಯದೇ ತೆರಳಿದ್ದಾರೆ ಇದು ಅನುಮಾನಕ್ಕೆ ಕಾರಣವಾಗಿದೆ.

ದಾಳಿ ನಡೆಸಿದ ಮೀನುಗಾರಿಕಾ ಇಲಾಖೆ ಅಧಿಕಾರಿಗಳು

ಆಗಸ್ಟ್ 18 ರಂದು ಅಕ್ರಮ ಕ್ಯಾಟ್​ ಫೀಶ್ ದಂಧೆಬಗ್ಗೆ ಈಟಿವಿ ಭಾರತ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಮೀನು ಸಾಕಾಣಿಕೆ ಹೊಂಡದ ಮೇಲೆ ಆಗಸ್ಟ್ 20ರಂದು ದಾಳಿ ನಡೆಸಿದ್ದಾರೆ. ಆದರೆ, ಅಲ್ಲಿ ಮೀನುಗಳ ನಾಶ ಮಾಡಬೇಕಾದ ಅಧಿಕಾರಿಗಳು ಯಾವುದೋ ಕರೆಗೆ ಬೆದರಿ ಜಾಗದಿಂದ ಕಾಲು ಕಿತ್ತಿದ್ದಾರೆ ಎನ್ನಲಾಗುತ್ತಿದೆ.

ಮೀನುಗಾರಿಕೆ ಇಲಾಖೆ ಸಹಾಯಕ ಉಪನಿರ್ದೇಶಕಿ ಪುಷ್ಪಲತಾ, ಮಂಡ್ಯ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಜೊತೆ, ತಮ್ಮ ಇಲಾಖೆ ವಾಹನ ಬಿಟ್ಟು ಬೈಕ್​ನಲ್ಲಿ ಕಾರಸವಾಡಿ ಸಮೀಪದ ಮೀನು ಸಾಕಾಣಿಕಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, ಫೋನ್​ ಕರೆ ಬರುತ್ತಿದ್ದಂತೆ ಜಾಗ ಖಾಲಿ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಇಂತಹ ಅಕ್ರಮ ಸಾಗಾಣಿಕೆಗೆ ಸಹಾಯಮಾಡುತ್ತಿದ್ದಾರಾ ಎಂಬುದು ಇಲ್ಲಿನ ಗ್ರಾಮಸ್ಥರ ಅನುಮಾನವಾಗಿದೆ.

ಕ್ಯಾಟ್ ಫಿಶ್ ಸಾಕಾಣಿಕೆ ನಿಷೇಧ ಮಾಡಲಾಗಿದೆ. ಇದು ಅಪರಾಧ ಕೂಡಾ. ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಲು ಶೀಘ್ರವೇ ತಿಳಿಸುವುದಾಗಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು..

ABOUT THE AUTHOR

...view details