ಮಂಡ್ಯ: ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಾವಿರಾರು ಮಂದಿ ಸಾಮೂಹಿಕ ಯೋಗಾಸನ ಮಾಡಿದರು. ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಸ್ವಾಮೀಜಿ ಜಲಯೋಗ ಮಾಡಿ ಯೋಗ ದಿನಾಚರಣೆ ಆಚರಿಸಿದರು.
ಮಂಡ್ಯದಲ್ಲಿ ಜಲಯೋಗ ಮಾಡಿ ಗಮನ ಸೆಳೆದ ಸ್ವಾಮೀಜಿ! - Kannada news
ಪಿಇಟಿ ಈಜು ಕೊಳದಲ್ಲಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಜಲಯೋಗ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಸ್ವಾಮೀಜಿಗೆ ಹಲವು ಈಜುಪಟುಗಳು ಸಾಥ್ ನೀಡಿದರು.

ಜಲ ಯೋಗ ಮಾಡಿ ಗಮನ ಸೆಳೆದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ
ಜಲಯೋಗ ಮಾಡಿ ಗಮನ ಸೆಳೆದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ
ನಗರದ ಸರ್ ಎಂವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆ ವತಿಯಿಂದ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಿತು. ಪಿಇಟಿ ಈಜು ಕೊಳದಲ್ಲಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಜಲಯೋಗ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಸ್ವಾಮೀಜಿಗೆ ಹಲವು ಈಜುಪಟುಗಳು ಸಾಥ್ ನೀಡಿದರು.
ಇನ್ನು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದರು.