ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಮತ್ತೊಂದು ಕೊರೊನಾ ‌ ಪ್ರಕರಣ ದೃಢ : ಸೋಂಕಿತರ ಸಂಖ್ಯೆ 29 ಕ್ಕೆ ಏರಿಕೆ - increase the corona cases in mandya

ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 29ಕ್ಕೆ ಏರಿದೆ.

corona
ಮಂಡ್ಯದಲ್ಲಿ ಮತ್ತೊಂದು‌ ಪ್ರಕರಣ

By

Published : May 11, 2020, 6:25 PM IST

Updated : May 11, 2020, 10:34 PM IST

ಮಂಡ್ಯ:ಮುಂಬೈನಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 29 ಕ್ಕೆ ಏರಿಕೆಯಾಗಿದೆ.

ಕ್ವಾರಂಟೈನ್‌ನಲ್ಲಿ ಇರಿಸಿದ್ದ ಈ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಜಿಲ್ಲೆಯಲ್ಲಿ 13 ಸಕ್ರಿಯ ಪ್ರಕರಣಗಳಿದ್ದು, ಇಂದು ಇಬ್ಬರು ಸೇರಿ ಒಟ್ಟು 16 ಸೋಂಕಿತರು ಗುಣಮುಖರಾಗಿದ್ದಾರೆ.

ಮಂಡ್ಯದಲ್ಲಿ ಹಾಸನದ ಸೋಂಕಿತ ಮಹಿಳೆಗೆ ಚಿಕಿತ್ಸೆ :

ಇಂದು ಹಾಸನದಲ್ಲಿ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇದು ಹಾಸನದಲ್ಲಿ ಕಂಡು ಬಂದ ಮೊದಲ ಪ್ರಕರಣವಾಗಿದೆ. ಈ ಮಹಿಳೆ ಮುಂಬೈನಿಂದ ಹಾಸನಕ್ಕೆ ಬಂದಿದ್ದರು. ಅವರಲ್ಲೂ ಕೊರೊನಾ ಸೋಂಕು ದೃಢಪಟ್ಟ ಕಾರಣ ಮಂಡ್ಯದ ಮಿಮ್ಸ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯದಲ್ಲಿ ಚಿಕಿತ್ಸೆ ಏಕೆ?:

ಸೋಂಕಿತ ಮಹಿಳೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಹಳ್ಳಿಯವರು. ಇವರ ಗ್ರಾಮಕ್ಕೆ ಮಂಡ್ಯದ ಕೆ.ಆರ್​.ಪೇಟೆ ತಾಲೂಕು ಸಮೀಪ. ಚನ್ನರಾಯಪಟ್ಟ ದೂರವಿರುವ ಕಾರಣ ಇವರಿಗೆ ಕೆ.ಆರ್​ಪೇಟೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಸಂದರ್ಭದಲ್ಲಿ ಇವರಿಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ. ಇದರಿಂದ ಈ ಮಹಿಳೆಗೆ ಮಂಡ್ಯದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

Last Updated : May 11, 2020, 10:34 PM IST

ABOUT THE AUTHOR

...view details