ಕರ್ನಾಟಕ

karnataka

ETV Bharat / state

ಕೆಆರ್‌ಎಸ್​​ನಲ್ಲಿ ಹೆಚ್ಚಿದ ಒಳಹರಿವು: ನಾಲೆಗಳಿಗಿಲ್ಲ, ನದಿಗೆ 5000 ಕ್ಯೂಸೆಕ್​ ನೀರು - ಕೃಷ್ಣರಾಜಸಾಗರ ಜಲಾಶಯ

ಕೃಷ್ಣರಾಜಸಾಗರ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದೆ. ಹಾಲಿ ಅಣೆಕಟ್ಟೆಯಲ್ಲಿ 17.644 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 94.58 ಅಡಿ ನೀರಿತ್ತು. ಅಂದು ಜಲಾಶಯಕ್ಕೆ 6,234 ಕ್ಯುಸೆಕ್ ಒಳಹರಿವಿದ್ದರೆ, ಅಣೆಕಟ್ಟೆಯಿಂದ 425 ಕ್ಯೂಸೆಕ್ ಹೊರಬಿಡಲಾಗುತ್ತಿತ್ತು. ಆ ವೇಳೆ ಜಲಾಶಯದಲ್ಲಿ 18.855 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

Increased water inflow in KRS
ಕೆಆರ್‌ಎಸ್​​ನಲ್ಲಿ ಹೆಚ್ಚಿದ ಒಳಹರಿವು

By

Published : Jun 21, 2021, 11:09 AM IST

ಮಂಡ್ಯ: ಕೆಆರ್‌ಎಸ್ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಹೊರಹರಿವನ್ನು ದಿಢೀರನೆ ಹೆಚ್ಚಿಲಾಗಿದೆ. ಇದರೊಂದಿಗೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿರುವ ಬಗ್ಗೆ ರೈತ ಸಮುದಾಯದಲ್ಲಿ ಅನುಮಾನ ವ್ಯಕ್ತವಾಗಿವೆ.

ಕೊಡಗಿನಲ್ಲಿ ನಿರಂತರ ಮಳೆಯಿಂದ ಐದು ದಿನಗಳಿಂದ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿತ್ತು. ಪ್ರಸ್ತುತ ಜಲಾಶಯಕ್ಕೆ 20,705 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಇದೇ ವೇಳೆ ಅಣೆಕಟ್ಟೆಯಿಂದ 5,141 ಕ್ಯುಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 94.58 ಅಡಿ ನೀರು ಸಂಗ್ರಹವಾಗಿದ್ದರೂ 425 ಕ್ಯುಸೆಕ್ ನೀರನ್ನು ಮಾತ್ರ ಹೊರಬಿಡಲಾಗುತ್ತಿತ್ತು. ಈ ಬಾರಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 92.75 ಅಡಿ ಇದ್ದರೂ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಸಹಜವಾಗಿಯೇ ಜೂನ್ ತಿಂಗಳ ಕಂತಿನ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆಯೇ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಕೆಆರ್‌ಎಸ್​​ನಲ್ಲಿ ಹೆಚ್ಚಿದ ಒಳಹರಿವು

ಕೃಷ್ಣರಾಜಸಾಗರ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದೆ. ಹಾಲಿ ಅಣೆಕಟ್ಟೆಯಲ್ಲಿ 17.644 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 94.58 ಅಡಿ ನೀರಿತ್ತು. ಅಂದು ಜಲಾಶಯಕ್ಕೆ 6,234 ಕ್ಯುಸೆಕ್ ಒಳಹರಿವಿದ್ದರೆ, ಅಣೆಕಟ್ಟೆಯಿಂದ 425 ಕ್ಯೂಸೆಕ್ ಹೊರಬಿಡಲಾಗುತ್ತಿತ್ತು. ಆ ವೇಳೆ ಜಲಾಶಯದಲ್ಲಿ 18.855 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

ನಾಲೆಗಳಿಗೆ ನೀರಿಲ್ಲ:ಕೃಷ್ಣರಾಜಸಾಗರ ಜಲಾಶಯದ ಒಳಹರಿವು ಹೆಚ್ಚಾಗಿದ್ದರೂ ಬೆಳೆದುನಿಂತಿರುವ ಬೆಳೆಗಳಿಗೆ ನೀರು ಹರಿಸದೆ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ರೈತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಕೈಕೊಟ್ಟಿದೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದ ಮಳೆಯಾಗಿಲ್ಲ. ಗಾಳಿಯಲ್ಲಿ ತೇವಾಂಶವಿಲ್ಲದೆ ಒಣಹವೆ ಹೆಚ್ಚಿದೆ. ಇದರಿಂದ ಭೂಮಿಯಲ್ಲಿನ ತೇವಾಂಶ ಕಡಿ ಮೆಯಾಗುತ್ತಿದೆ. ಬೆಳೆದು ನಿಂತಿರುವ ಕಬ್ಬು, ಭತ್ತ ಸೇರಿದಂತೆ ತೋಟಗಾರಿಕೆ ಬೆಳೆಗಳು ಒಣಗುತ್ತಿವೆ. ಈ ಪರಿಸ್ಥಿತಿಯಲ್ಲಿ ಒಂದು ಕಟ್ಟು ನೀರಿನ ಅವಶ್ಯಕತೆ ಇದೆ. ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಮುಂಗಾರು ಮಳೆ ಇನ್ನೂ ಜಿಲ್ಲೆಯಲ್ಲಿ ಆರಂಭಗೊಂಡಿಲ್ಲದ ಕಾರಣ ಭೂಮಿಯನ್ನು ಹದಗೊಳಿಸಲು, ಕೆಲವೆಡೆ ಬೆಳೆದು ನಿಂತಿರುವ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಕೂಡಲೇ ನಾಲೆಗಳಿಗೆ ನೀರನ್ನು ಬಿಡುಗಡೆ ಮಾಡಿದರೆ ಕೃಷಿ ಚಟುವಟಿಕೆಗೆ ಳನ್ನು ಚುರುಕುಗೊಳಿಸುವುದಕ್ಕೆ ಅನುಕೂಲವಾಗಲಿದೆ. ನೀರಾವರಿ ಇಲಾಖೆ ಅಧಿಕಾರಿಗಳು ತಮಿಳುನಾಡಿಗೆ ನೀರು ಹರಿಸುವುದಕ್ಕೆ ನೀಡುವ ಪ್ರಾಮುಖ್ಯತೆಯನ್ನು ರೈತರ ಹಿತ ಕಾಪಾಡುವುದಕ್ಕೆ ನೀಡುವುದು ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.

ಕೆಆರ್‌ಎಸ್‌ನಲ್ಲಿ ಹೆಚ್ಚು ನೀರು ಸಂಗ್ರಹವಾಗಿರಲಿ, ಕಡಿಮೆ ನೀರು ಸಂಗ್ರಹವಾಗಿರಲಿ ಪ್ರತಿ ಬಾರಿಯೂ ರೈತರು ನೀರಿಗಾಗಿ ಸರ್ಕಾರವನ್ನು ಅಂಗಲಾಚುವುದು ಸಾಮಾನ್ಯವಾಗಿದೆ. ತಮಿಳುನಾಡಿಗೆ ನೀರು ಹರಿಸುವುದರಲ್ಲಿ ಅರ್ಧದಷ್ಟು ನೀರನ್ನು ನಾಲೆಗಳಿಗೆ ನೀರು ಹರಿಸಿದರೆ ರೈತ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ABOUT THE AUTHOR

...view details