ಕರ್ನಾಟಕ

karnataka

ETV Bharat / state

ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ರಾಜಕೀಯ ಅನಿವಾರ್ಯವೂ ಅಲ್ಲ: ಸಂಸದೆ ಸುಮಲತಾ ಅಂಬರೀಶ್ - ಮಂಡ್ಯ ಕ್ಷೇತ್ರ ಬಿಟ್ಟು ಬೇರೆಡೆ ಹೋಗಲ್ಲ ಎಂದ ಸಂಸದೆ ಸುಮಲತಾ ಅಂಬರೀಶ್​

ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ರಾಜಕೀಯ ಅನಿವಾರ್ಯ ಅಲ್ಲ. ಮಂಡ್ಯದ ಜನತೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್​ ಹೇಳಿದ್ದಾರೆ.

ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್

By

Published : Jun 28, 2022, 7:17 PM IST

Updated : Jun 28, 2022, 7:41 PM IST

ಮಂಡ್ಯ: ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಅದೇ ರೀತಿ ಮಂಡ್ಯ ಕೂಡ ನನ್ನ ಬಿಡಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. ಇಂದು ಮಂಡ್ಯಕ್ಕೆ ರೈಲಿನಲ್ಲಿ ಆಗಮಿಸಿದ ಸುಮಲತಾ ರೈಲು ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಂಸದೆ ಸುಮಲತಾ ಅಂಬರೀಶ್ ಅವರು ಮಾತನಾಡಿರುವುದು

ದಶಪಥ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬ ಆಗುತ್ತಿಲ್ಲ. ನಿಗದಿಯಂತೆ ದಸರಾ ವೇಳೆಗೆ ದಶಪಥ ಹೆದ್ದಾರಿ ಉದ್ಘಾಟನೆಯಾಗಲಿದೆ. ಅಲ್ಲಿಯವರೆಗೂ ಸಾರ್ವಜನಿಕರು ಸಹಕರಿಸಬೇಕು. ಕಾಮಗಾರಿ ನಡೆಯುತ್ತಿರುವುದರಿಂದ ಟ್ರಾಫಿಕ್ ಕಿರಿಕಿರಿ ಆಗುತ್ತದೆ. ಹಾಗಾಗಿ, ಟ್ರೈನ್ ಮೂಲಕ ಮಂಡ್ಯಕ್ಕೆ ಆಗಮಿಸಿದ್ದೇನೆ. ಸಂಜೆ ಬೆಂಗಳೂರಿಗೆ ವಾಪಸ್ ಆಗುವ ಸಮಯಕ್ಕೆ ಟ್ರೈನ್ ಸಿಕ್ಕರೆ ಅದರಲ್ಲೇ ಹೋಗುತ್ತೇನೆ ಎಂದರು.

ನಂಗೆ ರಾಜಕೀಯ ಅನಿವಾರ್ಯ ಅಲ್ಲ: ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ರಾಜಕೀಯ ಅನಿವಾರ್ಯವೂ ಅಲ್ಲ. ಮಂಡ್ಯ ಹಾಗೂ ಮಂಡ್ಯದ ಜನತೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮಂಡ್ಯ ಜನರ ಋಣವನ್ನು ತೀರಿಸಲು ನಾನು ರಾಜಕೀಯದಲ್ಲಿದ್ದೇನೆ. ನಾನು ಮಂಡ್ಯ ಬಿಟ್ಟು ಹೋಗಲ್ಲ, ಮಂಡ್ಯ ನನ್ನನ್ನು ಬಿಡಲ್ಲ. ಹಗಲುಗನಸನ್ನು ಕೆಲವರು ಕಾಣುತ್ತಿದ್ದಾರೆ. ಆ ಕನಸು ಯಾವತ್ತೂ ನನಸು ಆಗಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ನಾನು ಯಾವತ್ತೂ ಮಂಡ್ಯದಲ್ಲಿಯೇ ಇರುತ್ತೇನೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಅದಕ್ಕಾಗಿ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿಯ ಚೀಪ್ ಗಿಮಿಕ್‌ಗಳನ್ನು ಈಗಲಾದರೂ ಬಿಡಿ. ಮಂಡ್ಯ ಅಭಿವೃದ್ಧಿ ಕಡೆಗೆ ಗಮನಹರಿಸೋಣ. ನನಗೆ ಅಧಿಕಾರದ ಆಸೆ ಇಲ್ಲ. ಹೀಗಾಗಿ ಯಾವುದೇ ಭಯ ನನಗಿಲ್ಲ. ಜನರ ಆಶೀರ್ವಾದ ಇದ್ದರೆ ಮಾತ್ರ ನಾವು ರಾಜಕೀಯದಲ್ಲಿರುತ್ತೇವೆ, ಆಶೀರ್ವಾದ ಇಲ್ಲ ಅಂದರೆ ಇಲ್ಲ ಎಂದು ಸುಮಲತಾ ಹೇಳಿದರು.

ಓದಿ:ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ತಗ್ಗಿಸಲು ಅಧಿಕಾರಿಗಳೊಂದಿಗೆ ಪೊಲೀಸ್ ಆಯುಕ್ತರ ಸಭೆ‌

Last Updated : Jun 28, 2022, 7:41 PM IST

For All Latest Updates

ABOUT THE AUTHOR

...view details