ಕರ್ನಾಟಕ

karnataka

ETV Bharat / state

ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ: ಪೊಲೀಸರು ಶಾಮೀಲು ಆರೋಪ - Mandya illegal sand mafia news

ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿ ಪಾತ್ರದ ಕೂಳಗೆರೆ, ಕೊಕ್ಕರೆ ಬೆಳ್ಳೂರು ಸೇರಿ ಹಲವಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.

Maddur
ಅಕ್ರಮ ಮರಳುಗಾರಿಕೆ

By

Published : Feb 10, 2021, 9:30 PM IST

ಮಂಡ್ಯ:ಮದ್ದೂರಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಮದ್ದೂರಿನ ಶಿಂಷಾ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಮದ್ದೂರು ತಾಲೂಕಿನ ಕೂಳಗೆರೆ, ಕೊಕ್ಕರೆ ಬೆಳ್ಳೂರು ಸೇರಿ ಹಲವಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.

ನದಿಯಲ್ಲಿ ಕೊಪ್ಪರಿಕೆ ಬಳಸಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡುತ್ತಿದ್ದಾರೆ. ಜಿಲ್ಲೆಯ ಪ್ರಭಾವಿ ವ್ಯಕ್ತಿಗಳು ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದು ಮರಳುಗಾರಿಕೆ ಮಾಡುತ್ತಿದ್ದಾರೆ.

ಅಕ್ರಮವಾಗಿ ನದಿಯಲ್ಲಿ ಮರಳುಗಾರಿಕೆ ನಡೀತಿದ್ರು ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ. ಅಧಿಕಾರಿಗಳು ಸೇರಿ ಪೊಲೀಸ್ ಇಲಾಖೆಗೆ ತಿಂಗಳ ಸಂದಾಯ ಮಾಡಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ABOUT THE AUTHOR

...view details