ಕರ್ನಾಟಕ

karnataka

ETV Bharat / state

ಸಾಲ ಮರುಪಾವತಿ ಮಾಡಿದರೆ ರೈತರ ಬಡ್ಡಿ ಮನ್ನಾ; ಜೂ.30ರ ಗಡುವು - ರೈತರಿಗೆ ಬಡ್ಡಿ ಮನ್ನಾದ ಸೌಲಭ್ಯ

ಸಾಲ ಪಡೆದು ಸುಸ್ತಿದಾರರಾದ ರೈತರಿಗೆ ಬಡ್ಡಿ ಮನ್ನಾದ ಸೌಲಭ್ಯ ಸಿಗಲಿದೆ. ರಾಜ್ಯ ಸರ್ಕಾರದ ಘೋಷಣೆ ಹಿನ್ನಲೆ, ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಿದ್ದು, ಜಿಲ್ಲೆಯ 5847 ರೈತರಿಗೆ ಅನುಕೂಲವಾಗಲಿದೆ. ಹಾಗಾಗಿ ಸುಸ್ತಿದಾರರಾದ ರೈತರು ಜೂ.30ರೊಳಗೆ ಅಸಲು ಪಾವತಿ ಮಾಡಿದರೆ ಬಡ್ಡಿ ಮನ್ನವಾಗಲಿದ್ದು, ಯೋಜನೆ ಸದುಪಯೋಗ ಪಡಿಸಿಕೊಳ್ಳುವಂತೆ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಎಂ.ಡಿ ಯತೀಶ್ ಕುಮಾರ್ ಮನವಿ ಮಾಡಿದ್ದಾರೆ.

Interest on loan
Interest on loan

By

Published : Jun 10, 2020, 6:19 PM IST

ಮಂಡ್ಯ: ಸಾಲ ಪಡೆದು ಸುಸ್ತಿದಾರರಾದ ರೈತರು ಜೂ. 30ರೊಳಗೆ ಅಸಲು ಪಾವತಿಸುವಂತೆ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಎಂ.ಡಿ ಯತೀಶ್ ಕುಮಾರ್ ಮನವಿ ಮಾಡಿದ್ದಾರೆ.

ಸಾಲ ಪಡೆದು ಸುಸ್ತಿದಾರರಾದ ರೈತರಿಗೆ ಬಡ್ಡಿ ಮನ್ನಾದ ಸೌಲಭ್ಯ ಸಿಗಲಿದೆ. ರಾಜ್ಯ ಸರ್ಕಾರದ ಘೋಷಣೆ ಹಿನ್ನಲೆ, ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಿದ್ದು, ಜಿಲ್ಲೆಯ 5847 ರೈತರಿಗೆ ಅನುಕೂಲವಾಗಲಿದೆ. ಹಾಗಾಗಿ ಸುಸ್ತಿದಾರರಾದ ರೈತರು ಜೂ.30ರೊಳಗೆ ಅಸಲು ಪಾವತಿ ಮಾಡಿದರೆ ಬಡ್ಡಿ ಮನ್ನವಾಗಲಿದ್ದು, ಯೋಜನೆ ಸದುಪಯೋಗ ಪಡಿಸಿಕೊಳ್ಳುವಂತೆ ಯತೀಶ್ ಕುಮಾರ್ ಮನವಿ ಮಾಡಿದ್ದಾರೆ.

ಜಿಲ್ಲಾ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‌ಗೆ ಭೇಟಿ ನೀಡಿ ಜಿಲ್ಲೆಯ 7 ತಾಲೂಕು ಅಧ್ಯಕ್ಷರ ಜೊತೆ ಸಮಾಲೋಚನೆ ಮಾಡಿ ಮಾಹಿತಿ ನೀಡಿದರು. ಅಧ್ಯಕ್ಷರು ಹಾಗೂ ಸಿಬ್ಬಂದಿ ರೈತರಿಗೆ ಮಾಹಿತಿ ನೀಡಬೇಕು. ಯೋಜನೆ ಕುರಿತು ಸಮಾಲೋಚನೆ ನಡೆಸಿ ಬಡ್ಡಿ ಪಾವತಿಯ ಯೋಜನೆ ರೈತರಿಗೆ ತಲುಪಿಸಿ ಎಂದು ಸಲಹೆ ನೀಡಿದ್ದಾರೆ.

ABOUT THE AUTHOR

...view details