ಕರ್ನಾಟಕ

karnataka

ETV Bharat / state

ಶಿಷ್ಯನ ಪರ ಧರಣಿ ಕೂರ್ತಾರಾ ಮಾಜಿ ಪಿಎಂ?: ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯ್ತು ಜಲ್ಲಿ ಕ್ರಷರ್! - ಶಿಷ್ಯನಿಗಾಗಿ ಧರಣಿ ಕೂರುತ್ತಾರಾ ಮಾಜಿ ಪಿಎಂ

ಮಂಡ್ಯ ಜಿಲ್ಲಾ ಪಂಚಾಯತ್ ಜೆಡಿಎಸ್ ಸದಸ್ಯರ ಕಲ್ಲು ಕ್ವಾರೆಯ ದಾಖಲೆ ಸರಿಯಾಗಿಯೇ ಇದೆ, ರಾಜಕೀಯ ವೈಷಮ್ಯದಿಂದ ತೊಂದರೆ ನೀಡಲಾಗುತ್ತಿದೆ ಎಂದು ದೇವೇಗೌಡರು ಆರೋಪ ಮಾಡಿದ್ದು, ಈ ಸಂಬಂಧ ಸಿಎಂ ಮನೆ ಮುಂದೆ ಜೂನ್ 29ರಂದು ಧರಣಿಯ ಎಚ್ಚರಿಕೆ ನೀಡಿದ್ದಾರೆ.

protest for his followers
ಮಾಜಿ ಪಿಎಂ

By

Published : Jun 28, 2020, 12:06 AM IST

Updated : Jun 28, 2020, 6:28 AM IST

ಮಂಡ್ಯ:ಮಾಜಿ ಪ್ರಧಾನಿ ದೇವೇಗೌಡರು, ಸಿಎಂ ಮನೆ ಮುಂದೆ ಧರಣಿ ಕೂರುವ ಎಚ್ಚರಿಕೆ ನೀಡಿದ್ಧಾರೆ. ಇದಕ್ಕೆ ಕಾರಣವಾಗಿದ್ದು ಮಂಡ್ಯ ಜಿಲ್ಲಾ ಪಂಚಾಯತ್ ಜೆಡಿಎಸ್ ಸದಸ್ಯರ ಕಲ್ಲು ಕ್ವಾರೆ. ದಾಖಲೆ ಸರಿಯಾಗಿಯೇ ಇದೆ, ರಾಜಕೀಯ ವೈಷಮ್ಯದಿಂದ ತೊಂದರೆ ನೀಡಲಾಗುತ್ತಿದೆ ಎಂದು ದೇವೇಗೌಡರು ಆರೋಪ ಮಾಡಿದ್ದು, ಈ ಸಂಬಂಧ ಸಿಎಂ ಮನೆ ಮುಂದೆ ಜೂನ್ 29ರಂದು ಧರಣಿಯ ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿ, ಶಿವಪುರ ಗ್ರಾಮ, ಬೊಮ್ಮನಾಯಕನಹಳ್ಳಿಯಲ್ಲಿ ನಡೆಯುತ್ತಿರುವ ಕ್ರಷರ್​ಗಳು ಕಾನೂನು ಬಾಹಿರ, ವನ್ಯ ಜೀವಿ ಸಂರಕ್ಷಣಾ ವಲಯ ಹಾಗೂ ಅರಣ್ಯ ವಲಯದಲ್ಲಿ ನಡೆಯುತ್ತಿವೆ ಎಂದು, ಸಾಮಾಜಿಕ ಹೋರಾಟಗಾರ ಕಲ್ಲಹಳ್ಳಿ ರವೀಂದ್ರ ದೂರು ನೀಡಿದ್ದರು. ದೂರಿನ ಹಿನ್ನೆಲೆ ಸಮ್ಮಿಶ್ರ ಸರ್ಕಾರದಲ್ಲೇ ಕ್ರಷರ್​ಗಳಿಗೆ ಬೀಗ ಜಡಿಯಲಾಗಿತ್ತು.

ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತು ಜಲ್ಲಿ ಕ್ರಷರ್

ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಮತ್ತು ತಂಡ ದಾಳಿ ಮಾಡಿ ಅಕ್ರಮವನ್ನು ಬಯಲು ಮಾಡಿತ್ತು. ಇದರ ಜೊತೆಗೆ ಗಣಿ ಅಧಿಕಾರಿಗಳು ದಾಳಿ ಮಾಡಿ 11 ಕೋಟಿ 5 ಲಕ್ಷ ರೂ. ದಂಡ ಕೂಡ ಹಾಕಿದ್ದರು. ಇದೇ ಪ್ರಕರಣ ಈಗ ಗಮನ ಸೆಳೆದಿದ್ದು, ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡಲಾಗುತ್ತಿದೆ. ಗಣಿ ಆರಂಭಕ್ಕೆ ಅನುಮತಿ ನೀಡದೇ ಇದ್ದರೆ ಜೂನ್ 29ರಂದು ಸಿಎಂ ಮನೆ ಮುಂದೆ ಧರಣಿ ಮಾಡೋದಾಗಿ ಮಾಜಿ ಪ್ರಧಾನಿ ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಧರಣಿ ಬೇಡ. ಕೆಲವು ದಿನ ಸಮಯ ಕೊಡಿ ದಾಖಲೆ ನೀಡುತ್ತೇನೆ ಎಂದು ಮನವಿ ಮಾಡಿದ್ದಾರೆ.

ಸಚಿವರ ಮನವಿಗೆ ಟಾಂಗ್ ಕೊಟ್ಟಿರುವ ಜೆಡಿಎಸ್ ಮುಖಂಡ ಹಾಗೂ ಆರೋಪ ಎದುರಿಸುತ್ತಿರುವ ಎಚ್.ಟಿ ಮಂಜು, ನನ್ನ ದಾಖಲೆ ಕಾನೂನು ಸಮ್ಮತವಾಗಿಯೇ ಇದೆ. ಮಾಜಿ ಪ್ರಧಾನಿ ದೇವೇಗೌಡರೇ ಕ್ರಷರ್​ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಾನು ಅಕ್ರಮ ಮಾಡಿಲ್ಲ, ಸಕ್ರಮವಾಗಿ ನಡೆಸುತ್ತಿದ್ದೇನೆ. ದೇವೇಗೌಡರ ಜೊತೆ ನಾನೂ ಧರಣಿ ಮಾಡುತ್ತೇನೆ ಎಂದಿದ್ದಾರೆ.

ದೇವೇಗೌಡರ ಧರಣಿ ವಿಚಾರ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಕ್ರಮ ಸಕ್ರಮದ ನಡುವೆ ಮೈಶುಗರ್ ಸಮಸ್ಯೆ ಕಣ್ಣಿಗೆ ಕಾಣಲಿಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ಸರ್ಕಾರದ ನಿಲುವು ಹಾಗೂ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ಕ್ರಷರ್ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿರೋದರಲ್ಲಿ ಅನುಮಾನವೇ ಇಲ್ಲ.

Last Updated : Jun 28, 2020, 6:28 AM IST

ABOUT THE AUTHOR

...view details