ಕರ್ನಾಟಕ

karnataka

ETV Bharat / state

ಬಿಜೆಪಿಗರಿಗೆ ಐಟಿ, ಇಡಿ ಭಯವಿಲ್ಲ ಹಾಗಾಗಿ ಏನ್ ಬೇಕಾದ್ರೂ ಮಾಡ್ತಾರೆ: ಜೆಡಿಎಸ್​ ಶಾಸಕ ಸುರೇಶ್ ಗೌಡ - ಇಡಿ ಐಟಿಯವರು ಮುಟ್ಟಲ್ಲ

ಈ ಬಾರಿ ಚುನಾವಣೆಯಲ್ಲಿ ಸರ್ಕಾರ ನೂರಕ್ಕೆ ಐನೂರು ಪರ್ಸೆಂಟ್ ದುರಪಯೋಗ ಆಗುತ್ತೆ. ನನಗೆ ಚುನಾವಣಾ ಅಕ್ರಮದ ಮಾಹಿತಿ ಗೊತ್ತಾದ್ರೆ ಖಂಡಿತಾ ಆಯೋಗಕ್ಕೆ ದೂರು ಬರೆಯುತ್ತೇನೆ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿದರು‌.

ಶಾಸಕ ಸುರೇಶ್ ಗೌಡ

By

Published : Nov 17, 2019, 8:37 PM IST

ಮಂಡ್ಯ: ಬಿಜೆಪಿಯವರಿಗೆ ಇಡಿ, ಐಟಿಯವರ ಭಯವಿಲ್ಲ. ಚುನಾವಣೆಯಲ್ಲಿ ಅವರು ಏನ್ ಬೇಕಾದ್ರು ಮಾಡ್ತಾರೆ‌‌‌‌ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ದೂರಿದರು‌.

ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ವೇಳೆ ಅತಿ ಹೆಚ್ಚು ಬೈ ಎಲೆಕ್ಷನ್ ನಡೆದ ಇತಿಹಾಸವಿದೆ. ಈಗ ಹಣಬಲದಲ್ಲಿಯೇ ಚುನಾವಣೆ ನಡೆಯುತ್ತಿದೆ. ಅವರಿಗೆ ಇಡಿ, ಐಟಿಯವರು ಮುಟ್ಟಲ್ಲ, ಬೇರೆ ಪಕ್ಷದವರಾದರೆ ಅವರಿಗೆ ಎಲ್ಲಾ ಭಯಾನು ಹುಟ್ಟಿಸ್ತಾರೆ. ಅವರಿಗೆ ಭಯ ಇಲ್ವಲ್ಲ ಹಾಗಾಗಿ ಏನ್ ಬೇಕಾದ್ರು ಮಾಡ್ತಾರೆ ಎಂದರು.

ಜೆಡಿಎಸ್ ಶಾಸಕ ಸುರೇಶ್ ಗೌಡ

ಈ ಬಾರಿ ಚುನಾವಣೆಯಲ್ಲಿ ಸರ್ಕಾರ ನೂರಕ್ಕೆ ಐನೂರು ಪರ್ಸೆಂಟ್ ದುರಪಯೋಗ ಆಗುತ್ತೆ. ಚುನಾವಣಾ ಆಯೋಗ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತೋ ನೋಡಬೇಕಾಗುತ್ತದೆ. ನನಗೆ ಚುನಾವಣಾ ಅಕ್ರಮದ ಮಾಹಿತಿ ಗೊತ್ತಾದ್ರೆ ಖಂಡಿತಾ ಆಯೋಗಕ್ಕೆ ದೂರು ಬರೆಯುತ್ತೇನೆ ಎಂದರು‌.

ABOUT THE AUTHOR

...view details