ಮಂಡ್ಯ:ಪೋನ್ ಕದ್ದಾಲಿಕೆ ಕುರಿತು ಎರಡು ತಿಂಗಳ ಹಿಂದೆಯೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇ ಎಂದು ಸಂಸದೆ ಸುಮಲತಾ ಅಂಬರೀಶ್ ಕದ್ದಾಲಿಕೆ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಜನ ಸಂಪರ್ಕ ಸಭೆ, ಅಧಿಕಾರಿಗಳ ಸಭೆ ಮಾಡಿದ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಆಡಳಿತದ ಅವಧಿಯಲ್ಲಿ ಪೋನ್ ಕದ್ದಾಲಿಕೆ ನಡೆದಿತ್ತು ಎಂಬ ಆರೋಪ ಕುರಿತು ಪ್ರತಿಕ್ರಿಯೆ ನೀಡಿದರು.ನನಗೆ ಅನುಮಾನ ಇತ್ತು. ಹಾಗಾಗಿ ದೂರು ನೀಡಿದ್ದೆ. ಆದರೆ ಈಗಿನ ಆರೋಪ ನನಗೆ ಗೊತ್ತಿಲ್ಲ. ಟಿವಿ ನೋಡುತ್ತಿಲ್ಲ ಎಂದು ಹೇಳಿದರು.
ಪೋನ್ ಕದ್ದಾಲಿಕೆ ಕುರಿತು ಹಿಂದೆಯೇ ದೂರು ನೀಡಿದ್ದೆ: ಸುಮಲತಾ ಅಂಬರೀಶ್ - ಚುನಾವಣಾ ಆಯೋಗಕ್ಕೆ ದೂರು
ಪೋನ್ ಕದ್ದಾಲಿಕೆ ಕುರಿತು ಎರಡು ತಿಂಗಳ ಹಿಂದೆಯೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇ ಎಂದು ಸಂಸದೆ ಸುಮಲತಾ ಅಂಬರೀಶ್ ಕದ್ದಾಲಿಕೆ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್
ಸಂಸದೆ ಸುಮಲತಾ ಅಂಬರೀಶ್
ಇನ್ನೂ ಒಂದು ವಾರಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದೇನೆ. ಜನರ ಸಂಕಷ್ಟ ಪರಿಹಾರಕ್ಕೆ ಪ್ರವಾಹ ಸ್ಥಳಕ್ಕೆ ಹೋಗಲಾಗುವುದು. ಅಕ್ರಮಗಳನ್ನು ತಡೆಯುವುದು ನನ್ನ ಕರ್ತವ್ಯ ಎಂದರು.ಇದಕ್ಕೂ ಮೊದಲು ಶ್ರೀರಂಗಪಟ್ಟಣ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸಿದರು. ಹಲವು ಮಾಹಿತಿಗಳನ್ನು ಸಂಗ್ರಹಿಸಿ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದರು.