ಮಂಡ್ಯ:ನಿಮ್ಮ ಪ್ರತಾಪಕ್ಕೆ ಹೆದರಿ ಓಡಿ ಹೋಗಲು ನಾನು ಸಂಸದೆ ಸುಮಲತಾ ಅಂಬರೀಶ್ ಅಮ್ಮಾ ಅಲ್ಲವೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಪೀಠಾಧಿಪತಿ ಋಷಿಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಠಾಣೆಗೆ ಸಹಿ ಹಾಕಲು ಕಾಳಿ ಮಠದ ಸ್ವಾಮಿ ಇಂದು ಆಗಮಿಸಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನಿಮ್ಮ ಗಣಿಗಾರಿಕೆ ವಿಚಾರಕ್ಕೆ ಬರುವುದಿಲ್ಲ. ಹಾಗಾಗಿ ನೀವು ಹೆದರುವುದು ಬೇಡ ಎಂದು ಹೇಳುವ ಮೂಲಕ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಟಾಂಗ್ ಕೊಟ್ಟರು.
ಋಷಿಕುಮಾರ ಸ್ವಾಮೀಜಿಯೇ ಅಲ್ಲ ಎಂಬ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಕಾಳಿ ಮಠದ ಸ್ವಾಮೀಜಿ, ನಾನು ಸ್ವಾಮೀಜಿ ಅಲ್ಲ ಎಂದು ಹೇಳುವ ಮೂಲಕ ನನಗೆ ಸರ್ಟಿಫಿಕೇಟ್ ಕೊಡುವುದು ಬೇಡ. ಅದರ ಬದಲು ತಮ್ಮ ಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲಿ. ಅವರ ಪ್ರತಾಪಗಳಿಗೆ ಹೆದರಿ ಓಡಿಹೋಗಲ್ಲ ಎಂದು ಗುಡುಗಿದರು.