ಮಂಡ್ಯ:ನಾನು ಶ್ರೀಮಂತರ ಪರ ಅಲ್ಲ, ಬಡವರ ಪರ ಇರುವವನು. ಆರು ತಿಂಗಳು ಸರ್ಕಾರ ಇದ್ದಿದ್ದರೆ, ನಿಮ್ಮೂರ ರಸ್ತೆ ಕಾಮಗಾರಿ ಮುಗಿದೋಗುತ್ತಿತ್ತು ಎಂದು ಸಮಸ್ಯೆ ಹೇಳಿಕೊಂಡ ಮಹಿಳೆಯರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಲ್ಲುದೇವನಹಳ್ಳಿಗಡ ತೆರಳಿ ವಾಪಸಾಗುವಾಗ ವೃದ್ಧೆಯೊಬ್ಬರು ಕೈ ಅಡ್ಡ ಹಾಕಿ ನನ್ನ ಕಾರು ನಿಲ್ಲಿಸಿದರು. ಕಷ್ಟ ತೋಡಿಕೊಂಡ ವೃದ್ಧೆಯೊಬ್ಬರಿಗೆ ಸಹಾಯ ಮಾಡುವ ಭರವಸೆ ನೀಡಿದರು. ವೃದ್ಧೆಯ ನಿರೀಕ್ಷೆಯಂತೆ ಆಕೆಯ ಮಗಳಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ಎಚ್ಡಿಕೆ ನೀಡಿದರು. ಇನ್ನು ಆರು ತಿಂಗಳು ಇದ್ದಿದ್ದರೆ ರಸ್ತೆ ಮಾಡಿ ಮುಗಿದೋಗುತ್ತಿತ್ತು ಎಂದ ಕುಮಾರಸ್ವಾಮಿ ತಿಳಿಸಿದರಲ್ಲದೇ, ಮತ್ತೆ ಮನವಿ ಮಾಡಿಕೊಂಡಾಗ ರಸ್ತೆ ಮಾಡಿಸುವ ಭರವಸೆ ನೀಡಿದರು.