ಮಂಡ್ಯ :ನಾನು ಸಿದ್ದರಾಮಯ್ಯ ಅವರ ಅಭಿಮಾನಿ. ಅವರು ರಾಜ್ಯ ಕಂಡ ಶ್ರೇಷ್ಠ ನಾಯಕರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಹಾಡಿ ಹೊಗಳಿದರು.
ಮಳವಳ್ಳಿಯ ಸಾಹಳ್ಳಿ ಗ್ರಾಮದ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಈ ಗ್ರಾಮಕ್ಕೆ ಬಂದಿರುವುದು ಒಂದು ಇತಿಹಾಸ. ನಾನು ಮೊದಲು ಸಿದ್ದರಾಮಯ್ಯ ಅವರ ಗರಡಿಯಲ್ಲಿದ್ದೆ. ಅವರು ಜೆಡಿಎಸ್‌ನಲ್ಲಿದ್ದಾಗ, ಅವರ ಮಾರ್ಗದರ್ಶನ ಪಡೆದೆ.
ಮಳವಳ್ಳಿ ಜೆಡಿಎಸ್ ಶಾಸಕ ಸಿದ್ದರಾಮಯ್ಯನವರ ಕುರಿತು ಅಭಿಮಾನದ ಮಾತು.. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅವರು ಬೇರೆಡೆ ಹೋದರು, ನಾನು ಕುಮಾರಸ್ವಾಮಿ ಜೊತೆ ಉಳಿದುಕೊಂಡೆ. ಆದ್ರೆ, ಅವರ ಮೇಲಿನ ಅಭಿಮಾನ ಮಾತ್ರ ಕಮ್ಮಿಯಾಗಿಲ್ಲ ಎಂದರು. ಹಿಂದುಳಿದವರಿಗೆ ಬದುಕು ಕಟ್ಟಿಕೊಡುವ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ.
ಅವರು ಸಿಎಂ ಆಗಿದ್ದಾಗ ಮಾಡಿದ ಯೋಜನೆಗಳು ಇಂದಿಗೂ ನಮ್ಮ ಮನಸ್ಸಲ್ಲಿದೆ. ವಿಧಾನಸಭೆಯಲ್ಲಿ ಅವರ ಭಾಷಣ ಕೇಳುತ್ತಿದ್ದರೆ ರೋಮಾಂಚನ ಆಗುತ್ತೆ. ಹೀಗಾಗಿ, ನಾನು ಕೂಡ ಸಭೆಯಲ್ಲಿ ಭಾಷಣ ಕೇಳುತ್ತೇನೆ ಎಂದು ವಿಪಕ್ಷ ನಾಯಕನನ್ನು ಹೊಗಳಿದರು.