ಕರ್ನಾಟಕ

karnataka

ETV Bharat / state

5 ವರ್ಷ ಲವ್​, 2 ತಿಂಗಳ ಹಿಂದೆ ಮದುವೆ... ಪತ್ನಿಗೆ ಕೈಕೊಟ್ಟು ಎಸ್ಕೇಪ್​ ಆದ 'ಮಂಡ್ಯದ ಗಂಡು'! - ಮಂಡ್ಯ ಅಪರಾಧ,

ಐದು ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ಆದ್ರೆ ನೂರೊಂದು ಆಸೆ ಇಟ್ಕೊಂಡಿದ್ದ ಗೃಹಿಣಿಗೆ ಗಂಡನೇ ಶಾಕ್​ ನೀಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

Husband cheat to wife, Husband cheat to wife in Mandya, Mandya crime, Mandya crime news, ಪತ್ನಿಗೆ ಮೋಸ ಮಾಡಿದ ಗಂಡ, ಮಂಡ್ಯದಲ್ಲಿ ಹೆಂಡ್ತಿಗೆ ಮೋಸ ಮಾಡಿದ ಪತಿ, ಮಂಡ್ಯ ಅಪರಾಧ, ಮಂಡ್ಯ ಅಪರಾಧ ಸುದ್ದಿ,
ಪತ್ನಿಗೆ ಕೈಕೊಟ್ಟು ಎಸ್ಕೇಪ್​ ಆದ ಮಂಡ್ಯದ ಗಂಡು

By

Published : Feb 4, 2021, 10:59 AM IST

ಮಂಡ್ಯ : ಮದುವೆಯಾಗಿ ಸಂಬಂಧಿಕರ ಮನೆಯಲ್ಲಿ ತನ್ನ ಪತ್ನಿಯನ್ನು ಬಿಟ್ಟು ಪತಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆ ಗ್ರಾಮದಲ್ಲಿ ‌ನಡೆದಿದೆ.

ಪತ್ನಿಗೆ ಕೈಕೊಟ್ಟು ಎಸ್ಕೇಪ್​ ಆದ 'ಮಂಡ್ಯದ ಗಂಡು'

ಹುಲಿಗೆರೆಪುರ ತೇಜಸ್ವಿ ಪತ್ನಿಯನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವತಿ ಹಾಗೂ ತೇಜಸ್ವಿ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಹೆಂಡತಿಯನ್ನ ಸಂಬಂಧಿಕರ ಮನೆಯಲ್ಲಿರಿಸಿ ತೇಜಸ್ವಿ ನಾಪತ್ತೆಯಾಗಿದ್ದಾನೆ.

ತನ್ನ ಗಂಡನನ್ನ ಹುಡುಕಿ ಬಂದವಳೀಗ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕುತ್ತಿದ್ದು, ವಂಚನೆಗೊಳಗಾದ ಯುವತಿ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾಳೆ.

ಸದ್ಯ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details