ಮಂಡ್ಯ: "ಡಿ ಕೆ ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ, ಅದಕ್ಕೆ ಎಲ್ಲಾ ಅವಕಾಶಗಳಿವೆ" ಎಂದು ನೊಣವಿನಕೆರೆಯ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದ ಶ್ರೀ ಪಟ್ಟಲದಮ್ಮ ದೇವಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಅವರು ಕೂಡ ನಮ್ಮ ಮಠದ ಭಕ್ತರು ಅದಕ್ಕೆ ನಾವು ಕೂಡ ಸಂಕಲ್ಪ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಅವಕಾಶ ಇದೆ" ಎಂದರು.
ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ : ನೊಣವಿನಕೆರೆಯ ಶಿವಯೋಗೇಶ್ವರ ಸ್ವಾಮೀಜಿ ಭವಿಷ್ಯ - ಈಟಿವಿ ಭಾರತ ಕರ್ನಾಟಕ
ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ ಅವರು ಡಿ ಕೆ ಶಿವಕುಮಾರ್ ರಾಜ್ಯದ ಮುಂದಿನ ಸಿಎಂ ಆಗುತ್ತಾರೆ. ಅದಕ್ಕೆ ಎಲ್ಲಾ ಅವಕಾಶಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ : ಶಿವಯೋಗೇಶ್ವರ ಸ್ವಾಮೀಜಿ ಭವಿಷ್ಯ
Published : Dec 9, 2023, 4:38 PM IST
|Updated : Dec 9, 2023, 4:54 PM IST
"ಮೀಸಲಾತಿ ವಿಚಾರವಾಗಿ ಶಾಸಕರು ಹೋರಾಟ ಮಾಡುತ್ತಾರೆ. ರಾಜಕೀಯ ವ್ಯವಸ್ಥೆಯಲ್ಲಿ ಆ ಹೋರಾಟಕ್ಕೆ ಅವಕಾಶ ಇದೆ. ಎಲ್ಲಾ ಸಮುದಾಯಗಳು ಇನ್ನಷ್ಟು ಹೆಚ್ಚಾಗಿ ಸಂಘಟನೆಯಲ್ಲಿ ಬೆಳೆಯುವವರೆಗೆ ಸರ್ಕಾರ ಮೀಸಲಾತಿ ಕೊಟ್ಟು, ಅವಕಾಶ ಮಾಡಿಕೊಡಬೇಕು" ಎಂದು ಹೇಳಿದರು.
ಇದನ್ನೂ ಓದಿ:ಜೆಡಿಎಸ್ನಿಂದ ಸಿ ಕೆ ನಾಣು, ಸಿಎಂ ಇಬ್ರಾಹಿಂ ಉಚ್ಛಾಟನೆ; ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ
Last Updated : Dec 9, 2023, 4:54 PM IST