ಕರ್ನಾಟಕ

karnataka

ETV Bharat / state

ಕೆಆರ್‌ಎಸ್ ಉಳಿವಿಗಾಗಿ ಆ. 10ರಂದು ಪಾದಯಾತ್ರೆ - Mandya

ಕೆಆರ್‌ಎಸ್ ಅಣೆಕಟ್ಟೆಯ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಆ. 10ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

Hiking For KRS survival..
ಕೆಆರ್‌ಎಸ್ ಉಳಿವಿಗಾಗಿ ಆ. 10ರಂದು ಪಾದಯಾತ್ರೆ

By

Published : Aug 4, 2020, 2:01 PM IST

Updated : Aug 4, 2020, 2:41 PM IST

ಮಂಡ್ಯ: ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಾಗಿದೆ. ಅಣೆಕಟ್ಟೆಯ 20 ಕಿ.ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಆ. 10ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಕೆಆರ್‌ಎಸ್ ಉಳಿವಿಗಾಗಿ ಆ.10 ರಂದು ಪಾದಯಾತ್ರೆ

ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪಾದಯಾತ್ರೆ ಹಮ್ಮಿಕೊಂಡಿದ್ದು, ಕೆಆರ್‌ಎಸ್‌ನಿಂದ ಆರಂಭಗೊಂಡು ಶ್ರೀರಂಗಪಟ್ಟಣ ತಹಶೀಲ್ದಾರರ ಕಚೇರಿ ತಲುಪಲಿದೆ.

ಪಾದಯಾತ್ರೆಯಲ್ಲಿ ಸಾಹಿತಿಗಳು, ದಲಿತ ಸಂಘಟನೆ ಮುಖಂಡರು, ರೈತರು, ಕನ್ನಡಪರ ಹೋರಾಟಗಾರರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಮಂಡ್ಯ ಬಂದ್ ಆಚರಣೆ ಮಾಡಲಾಗಿತ್ತು. ಈಗ ಪಾದಯಾತ್ರೆ ನಡೆಯಲಿದೆ.

Last Updated : Aug 4, 2020, 2:41 PM IST

ABOUT THE AUTHOR

...view details