ಮಂಡ್ಯ: ಪಿಇಎಸ್ ಕಾಲೇಜಿನಲ್ಲಿ ಜೈಶ್ರೀರಾಮ್ ಘೋಷಣೆಗೆ ಪ್ರತಿಯಾಗಿ 'ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್..' ಎಂದು ಘೋಷಣೆ ಕೂಗಿದ್ದ ಹಿಜಾಬ್‌ಧಾರಿ ವಿದ್ಯಾರ್ಥಿನಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎನ್ನಲಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
'ಈ ಹಣವು ಆದಷ್ಟು ಬೇಗ ಅವಳ ಕುಟುಂಬಕ್ಕೆ ಸೇರಲಿ, ಅದೇ ರೀತಿ ಈ ಹಣವು ಸಹೋದರಿಯ ಉನ್ನತ ಶಿಕ್ಷಣಕ್ಕೆ ಉಪಯೋಗಿಸಲಿ, ಡಾಕ್ಟರ್, ವಕೀಲೆ ಅಥವಾ ಇನ್ನಿತರ ಯಾವುದೇ ಉನ್ನತ ಹುದ್ದೆ ಅಲಂಕರಿಸಲಿ' ಎಂಬ ಬರಹವುಳ್ಳ ಪೋಸ್ಟ್ ಅನ್ನು ಇರ್ಜಾನ್ ಅದ್ದೂರ್ ಎಂಬಾತ ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾನೆ.