ಮಂಡ್ಯ: ಕಳೆದ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಬಾಳೆ ಬೆಳೆ ನಾಶವಾದ ಘಟನೆ ಮದ್ದೂರು ತಾಲೂಕಿನ ಅರೆ ತಿಪ್ಪೂರು ಗ್ರಾಮದಲ್ಲಿ ನಡೆದಿದೆ.
ಮಂಡ್ಯದಲ್ಲಿ ಗಾಳಿ ಸಹಿತ ಭಾರೀ ಮಳೆ : ಬಾಳೆ ಬೆಳೆ ನಾಶ - Heavy rain
ನಿನ್ನೆ ರಾತ್ರಿ ಮಂಡ್ಯದಲ್ಲಿ ಭಾರೀ ಗಾಳಿ ಸಹಿತ ಮಳೆಯಾದ ಪರಿಣಾಮ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ.
ಮಂಡ್ಯದಲ್ಲಿ ಗಾಳಿ ಸಹಿತ ಭಾರೀ ಮಳೆ
ಗ್ರಾಮದ ಮನೋಹರ್ ಗೌಡ ಎಂಬುವವರಿಗೆ ಸೇರಿದ ಸುಮಾರು 5 ಎಕರೆಯ ಬಾಳೆ ಬೆಳೆ ನಾಶವಾಗಿದೆ. ಒಂದು ವಾರದ ನಂತರ ಬೆಳೆ ಕೂಯ್ಲಿಗೆ ಬರಲಿತ್ತು. ಬೆಳೆ ರಕ್ಷಣೆಗಾಗಿ ಮುಂಜಾಗ್ರತಾ ವಸ್ತುಗಳ ಖರೀದಿ ಮಾಡಲು ಸಾಧ್ಯವಾಗದೇ ನಷ್ಟವಾಗಿದೆ.
ಬಾಳೆ ಬೆಳೆಯಲು ರೈತ ಒಂದು ಸಸಿಗೆ 200 ರೂಪಾಯಿಯಷ್ಟು ವೆಚ್ಚ ಮಾಡಿದ್ದರು. ಇನ್ನೇನು ಬೆಳೆ ಕೈಗೆ ಬರುವಷ್ಟರಲ್ಲಿ ಬಿರುಗಾಳಿ ಮಳೆಗೆ ಬೆಳೆ ನಾಶ ಹೊಂದಿದೆ. ನಷ್ಟ ಹೊಂದಿರುವ ರೈತನ ಸಹಾಯಕ್ಕೆ ಸರ್ಕಾರ ಬರಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.