ಮಂಡ್ಯ: ಕಾವೇರಿ ನದಿ ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷ್ಣರಾಜ ಸಾಗರ (ಕೆಆರ್‌ಎಸ್)ಜಲಾಶಯದ ನೀರಿನ ಮಟ್ಟ 110.10 ಅಡಿಗೆ ತಲುಪಿದೆ.
ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರಮಾಣದ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.
ಕೃಷ್ಣರಾಜ ಸಾಗರ (ಕೆಆರ್‌ಎಸ್)ಜಲಾಶಯದ ನೀರಿನ ಮಟ್ಟ ಏರಿಕೆ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳು ಸೇರಿದಂತೆ ಜಲಾನಯನ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ನಿನ್ನೆಯವರೆಗೆ ಕೆಆರ್‌ಎಸ್ ಜಲಾಶಯದಲ್ಲಿ 109.55 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಇಂದು 110.10 ಅಡಿಗೆ ಏರಿಕೆಯಾಗಿದೆ.
ಜಲಾಶಯದ ಒಳ ಹರಿವು 37048 ಸಾವಿರ ಕ್ಯೂಸೆಕ್ಸ್ಗೂ ಹೆಚ್ಚಿನ ಪ್ರಮಾಣದಲ್ಲಿದೆ. ಜಲಾನಯನ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಒಳ ಹರಿವಿನ ಪ್ರಮಾಣ ಹೆಚ್ಚಿದೆ. ಹೀಗಾಗಿ, ಈ ವರ್ಷವೂ ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು.
ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ..
ಗರಿಷ್ಠ ಮಟ್ಟ 124.80 ಅಡಿ.
ಇಂದಿನ ಮಟ್ಟ 110.10 ಅಡಿ.
ಒಳ ಹರಿವು 37048 ಕ್ಯೂಸೆಕ್.
ಹೊರ ಹರಿವು 9984 ಕ್ಯೂಸೆಕ್
ಪ್ರಸ್ತುತ ನೀರಿನ ಸಂಗ್ರಹ 31.821 ಟಿಎಂಸಿ
ನೀರು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ
ಇದನ್ನೂ ಓದಿ:ಹೈಕಮಾಂಡ್ ಸಂದೇಶಕ್ಕೆ ಕ್ಷಣಗಣನೆ.. ಸಿಎಂ ನಿವಾಸಕ್ಕೆ ಕುಟುಂಬ ಸದಸ್ಯರ ಆಗಮನ