ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಮಳೆಯಾರ್ಭಟ: ಊಟ, ನಿದ್ದೆಯಿಲ್ಲದೆ ಜನರ ಪರದಾಟ, ಕುಸಿತಗೊಂಡ ಸೇತುವೆ - ಮಂಡ್ಯದಲ್ಲಿ ಮಳೆ ಹೆಚ್ಚಾಗಿ ಮನೆಗೆ ನೀರು ನುಗ್ಗಿದೆ

ಹಳ್ಳದಲ್ಲಿ ನೀರು ಹೆಚ್ಚಾದ ಕಾರಣದಿಂದ ಸೇತುವೆ ಕೊಚ್ಚಿಹೋಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿರುವ ವಾಹನ ಸವಾರರು ಹೈರಾಣಾಗಿದ್ದಾರೆ.

ಮಂಡ್ಯದಲ್ಲಿ ಹೆಚ್ಚಾದ ಮಳೆ
ಮಂಡ್ಯದಲ್ಲಿ ಹೆಚ್ಚಾದ ಮಳೆ

By

Published : May 19, 2022, 5:15 PM IST

Updated : May 19, 2022, 6:12 PM IST

ಮಂಡ್ಯ: ರಾಜ್ಯದ ಹಲವೆಡೆ ಎಡಬಿಡದೇ ಸುರಿಯುತ್ತಿರುವ ಮಳೆಗೆ ಭಾರಿ ಅನಾಹುತವೇ ಸೃಷ್ಟಿಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸಂಕಷ್ಟ ಎದುರಾಗಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಸೇತುವೆಯೇ ಕುಸಿದಿದೆ. ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಡ್ಡ ನಿರ್ಮಿಸಿದ್ದ ಮಂಡ್ಯದ ಇಂಡುವಾಳು ಬಳಿ ಸೇತುವೆ ಕೊಚ್ಚಿಹೋಗಿದೆ.

ಹಳ್ಳದಲ್ಲಿ ನೀರು ಹೆಚ್ಚಾದ ಕಾರಣದಿಂದ ಸೇತುವೆ ಕೊಚ್ಚಿಹೋಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿರುವ ವಾಹನ ಸವಾರರು ಹೈರಾಣಾಗಿದ್ದಾರೆ. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಳೆ ಹೆಚ್ಚಾದ್ರೆ ಹೆದ್ದಾರಿ ಇನ್ನಷ್ಟು ಕುಸಿಯುವ ಆತಂಕ ವ್ಯಕ್ತವಾಗಿದೆ.

ಮಂಡ್ಯದಲ್ಲಿ ಮಳೆಯಾರ್ಭಟ: ಊಟ, ನಿದ್ದೆಯಿಲ್ಲದೆ ಜನರ ಪರದಾಟ, ಕುಸಿತಗೊಂಡ ಸೇತುವೆ

ಈ ಮಧ್ಯೆ ಮಂಡ್ಯದ ಬೀಡಿ ಕಾಲನಿ ಸಂಪೂರ್ಣ ಜಲಾವೃತಗೊಂಡಿದ್ದು, 1000ಕ್ಕೂ ಹೆಚ್ಚು ಮನೆಗಳಿರುವ ಮಂಡ್ಯದ ಬೀಡಿ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ.

ಇದನ್ನೂ ಓದಿ: ಕಿರುತೆರೆ ನಟಿ ಚೇತನಾಗೆ ಫ್ಯಾಟ್ ಸರ್ಜರಿ ನಡೆಸಿ ಸಾವಿಗೆ ಕಾರಣವಾಗಿದ್ದ ಆಸ್ಪತ್ರೆ ಬಂದ್!

Last Updated : May 19, 2022, 6:12 PM IST

ABOUT THE AUTHOR

...view details