ಮಂಡ್ಯ:ಬೇಸಿಗೆ ಬಿಸಿಲ ತಾಪದಿಂದ ಸುಡುತ್ತಿದ್ದ ಸಕ್ಕರೆ ನಾಡಿನ ಹಲವು ಭಾಗಗಳಲ್ಲಿ ವರ್ಷದ ಮೊದಲ ವರುಣನ ಸಿಂಚನವಾಗಿದೆ. ವರುಣನ ಆರ್ಭಟಕ್ಕೆ ಜಿಲ್ಲೆಯ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಕಳೆದ ರಾತ್ರಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದು, ಬಹುತೇಕ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು.
ಸಂಜೆ 7 ಕ್ಕೆ ಶುರುವಾದ ಮಳೆ ಸುಮಾರು 2 ಗಂಟೆಗಳಿಗೂ ಹೆಚ್ಚು ಸುರಿಯಿತು. ಈ ವೇಳೆ ಅಂಚೆ ಕಚೇರಿ ಆವರಣಕ್ಕೆ ಮಳೆ ನೀರು ನುಗ್ಗಿತು. ಮಹಾವೀರ ಸರ್ಕಲ್, ಹೊಸಹಳ್ಳಿ ಸರ್ಕಲ್, ಹೊಳಲು ವೃತ್ತ, ಎಸ್.ಡಿ.ಜಯರಾಂ ಸರ್ಕಲ್, ರೈಲ್ವೆ ಗೇಟ್ ಬಳಿ ಸಿಲ್ವರ್ ಜ್ಯುಬಿಲಿ ಪಾರ್ಕ್, ಅರಣ್ಯ ಇಲಾಖೆ ಕಚೇರಿ ಬಳಿ ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಗಿತ್ತು.