ಕರ್ನಾಟಕ

karnataka

ETV Bharat / state

ಮಂಡ್ಯದ ವಿವಿಧೆಡೆ ಮಳೆ: ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿ - ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿ

ಮಂಡ್ಯದಲ್ಲಿ ಉತ್ತಮ ಮಳೆಯಾಗಿದ್ದು, ಜನರು ಚಳಿಯ ವಾತಾವರಣ ಅನುಭವಿಸುತ್ತಿದ್ದಾರೆ. ಸೈಕ್ಲೋನ್‌ ಮಾದರಿಯಲ್ಲಿ ಮೋಡ ಮುಚ್ಚಿದ ವಾತಾವರಣವಿದೆ.

rain
rain

By

Published : Jan 7, 2021, 9:55 AM IST

ಮಂಡ್ಯ:ಇಂದು ಬೆಳಗ್ಗೆಯಿಂದ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ನಗರದಲ್ಲಿ ಬೆಳಗ್ಗಿನ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

ಸೈಕ್ಲೋನ್‌ ಮಾದರಿಯಲ್ಲಿ ಮೋಡ ಮುಚ್ಚಿದ ವಾತಾವರಣ ಎಲ್ಲೆಡೆ ಇದ್ದು, ಜನರು ಚಳಿಯ ವಾತಾವರಣ ಅನುಭವಿಸುತ್ತಿದ್ದಾರೆ. ನಗರದಲ್ಲಿ ಬೆಳಗ್ಗೆ ಆರಂಭವಾದ ಮಳೆ ಬಿಟ್ಟು ಬಿಡದೇ ಸುರಿಯುತ್ತಿದೆ.

ಮಂಡ್ಯದಲ್ಲಿ ಮಳೆ

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿಯುತ್ತಿದ್ದು, ವಿವಿ ರಸ್ತೆ, ಆರ್‌ಪಿ ರಸ್ತೆ, ವಿವೇಕಾನಂದ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ABOUT THE AUTHOR

...view details