ಕರ್ನಾಟಕ

karnataka

ಮಂಡ್ಯ ಜಿಲ್ಲೆಯ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ: ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಗ್ರಾಮಸ್ಥರ ಪಟ್ಟು

ಮಂಡ್ಯ ಜಿಲ್ಲೆಯ ನಾಗಮಂಗಲದ ಸುತ್ತಲಿನ ಸುಮಾರು 30ಕ್ಕೂ ಹೆಚ್ಚಿನ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತವೆ. ಸರ್ಕಾರ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

By

Published : Apr 23, 2020, 10:38 PM IST

Published : Apr 23, 2020, 10:38 PM IST

Heavy drinking water problem in mandya
ಗ್ರಾಮಗಳಲ್ಲಿ ನೀರಿನ ಹಾಹಾಕಾರ

ಮಂಡ್ಯ: ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಹಾಹಾಕಾರವೇ ಸದ್ದು ಮಾಡುವ ಗ್ರಾಮಗಳಿರುವ ಜಿಲ್ಲೆ ಇದು. ತಾಲೂಕಿನ 30 ಹಳ್ಳಿಗಳ ನಿವಾಸಿಗಳು ನೀರಿಗಾಗಿ ಕಿಲೋ ಮೀಟರ್​ಗಟ್ಟಲೆ ಅಲೆದಾಡುವುದು ದಶಕಗಳಿಂದಲೂ ಇಲ್ಲಿ ನಡೆದುಕೊಂಡು ಬಂದಿದೆ.

ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ

ಜಿಲ್ಲೆಯ ನಾಗಮಂಗಲ ಸುತ್ತಲಿನ ಗ್ರಾಮಗಳ ನೀರಿನ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಕೊಳವೆ ಬಾವಿಗಳ ಮೊರೆ ಹೋಗಿದ್ದಾರೆ. ಆದರೂ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನೂರಾರು ಅಡಿ ಭೂಮಿ ಕೊರೆಯಲಾಗಿದೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಕೈಕೊಡುತ್ತಿವೆ.

ಬೇಸಿಗೆ ಆರಂಭಕ್ಕೂ ಮುನ್ನ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು ಎಂದು ದಶಗಳಿಂದ ಆಗ್ರಹಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ತಾತ್ಕಾಲಿಕ ಕೊಳವೆ ಬಾವಿಯಿಂದ ಯಾವುದೇ ಪರಿಹಾರ ಇಲ್ಲ ಎಂದು ಗ್ರಾಮಗಳ ಪ್ರವಾಸ ಕೈಗೊಂಡ ಶಾಸಕ ಸುರೇಶ್​ ಗೌಡ ಅವರನ್ನು ಸ್ಥಳೀಯರು ಒತ್ತಾಯಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ಯೋಜನೆ ಬೇಕಿದೆ. ದಶಕಗಳ ಇವರ ಬೇಡಿಕೆಗೆ ಸರ್ಕಾರ ಈಗಲಾದರೂ ಸ್ಪಂದಿಸಬೇಕು ಎಂದು ಶಾಸಕ ಸುರೇಶ್​ ಮನವಿ ಮಾಡಿದರು.

ABOUT THE AUTHOR

...view details