ಮಂಡ್ಯ: ಭಾರಿ ಮಳೆಗೆ ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದೆ. ಪ್ರಯಾಣಿಕರು ಪರದಾಡುತ್ತಿದ್ದು, ಸ್ಥಳೀಯ ಜನರು ವಾಹನಗಳಿಗೆ ದಾರಿ ಮಾಡಿಕೊಟ್ಟು ಸಹಕರಿಸಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ ಬಳಿ ನಡೆದಿದೆ.
ಕಳೆದ ರಾತ್ರಿ ಜೋರು ಮಳೆಗೆ ಹಳ್ಳಗಳು ತುಂಬಿದ್ದು, ಕೆರೆಗಳು ಕೋಡಿ ಬಿದ್ದಿವೆ. ಇದರಿಂದ ಸೇತುವೆ ಮೇಲೆ ನೀರು ಹರಿದು ಬರ್ತಿದೆ. ಹೀಗಾಗಿ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ರಸ್ತೆಯಲ್ಲಿ ನೀರು ತುಂಬಿರುವುದರಿಂದ ವಾಹನ ಚಾಲಕರು ರಸ್ತೆ ಕಾಣದೆ ಪರದಾಡುತ್ತಿದ್ದಾರೆ. ಸ್ಥಳೀಯರು ನೀರಿನ ಮಧ್ಯೆ ದಾರಿ ತೋರಿಸುತ್ತಾ ವಾಹನ ಚಾಲಕರಿಗೆ ನೆರವಾಗುತ್ತಿದ್ದಾರೆ. ಮತ್ತೊಂದು ಕಡೆ ಕೆ.ಆರ್.ಪೇಟೆ ತಾಲ್ಲೂಕಿನ ಹಲವು ಕೆರೆಗಳು ಸಂಪೂರ್ಣ ಭರ್ತಿಯಾಗಿವೆ.