ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತದಲ್ಲಿ ಜೆಡಿಎಸ್​ ಕಾರ್ಯಕರ್ತ ಸಾವು.. ಅಂತಿಮ ದರ್ಶನ ಪಡೆದ ಹೆಚ್​ಡಿಕೆ - HD Kumaraswamy submitted last salute to JDS worker

ನಾಗಮಂಗಲ ತಾಲೂಕಿನ ಹೂಣಕೆರೆ ಗ್ರಾಮದ ಬಳಿಯ ಶ್ರೀರಂಗಪಟ್ಟಣ-ನಾಗಮಂಗಲ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಬೈಕ್‌ನಲ್ಲಿದ್ದ ಜೆಡಿಎಸ್​ ಕಾರ್ಯಕರ್ತ ಆನಂದ್ ಕುಮಾರ್, ಅಮ್ಮು ಹಾಗೂ ನಾಲ್ಕು ತಿಂಗಳ ಗಂಡು ಮಗು ಸ್ಥಳದಲ್ಲಿ ಮೃತಪಟ್ಟಿದ್ದಾರೆ..

HD Kumaraswamy visited to JDS worker funeral
ರಸ್ತೆ ಅಪಘಾತದಲ್ಲಿ ಜೆಡಿಎಸ್​ ಕಾರ್ಯಕರ್ತ ಸಾವು

By

Published : Sep 5, 2021, 4:40 PM IST

Updated : Sep 5, 2021, 6:53 PM IST

ಮಂಡ್ಯ :ನಿನ್ನೆ ರಾತ್ರಿ ಹೆದ್ದಾರಿ ಬದಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್​​ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿರುವ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

ಅಪಘಾತದಲ್ಲಿ ಜೆಡಿಎಸ್​ ಕಾರ್ಯಕರ್ತ ಸಾವನ್ನಪ್ಪಿದ ಹಿನ್ನೆಲೆ ಮಾಜಿ ಸಿಎಂ‌ ಹೆಚ್​ ಡಿ ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊಣಕೆರೆಯಲ್ಲಿ ಮೃತ ಕಾರ್ಯಕರ್ತನ ಅಂತಿಮ ದರ್ಶನ ಪಡೆದರು.

ರಸ್ತೆ ಅಪಘಾತದಲ್ಲಿ ಜೆಡಿಎಸ್​ ಕಾರ್ಯಕರ್ತ ಸಾವು.. ಕುಟುಂಬಸ್ಥರಿಗೆ ಹೆಚ್ ಡಿಕೆ ಸಾಂತ್ವನ

ಬಳಿಕ ಮಾತನಾಡಿದ ಮಾಜ ಸಿಎಂ ಹೆಚ್​ಡಿಕೆ, ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆನಂದ್‌ ಕುಮಾರ್ ಅವರನ್ನು ಕಳೆದುಕೊಂಡು ತುಂಬಾ ನೋವುಂಟಾಗಿದೆ. ಆ ಪುಟ್ಟ ಮಕ್ಕಳು ಸಾವನ್ನಪ್ಪಿರುವುದು ಕರುಳು ಚುರುಕ್ ಅನ್ನಿಸುತ್ತದೆ. ದೇವರು ಯಾಕೆ ಇಷ್ಟು ಬೇಗ ಕರೆದುಕೊಳ್ಳುತ್ತಾನೆ ಅಂತಾ ನೋವಾಗುತ್ತದೆ ಎಂದು ಭಾವುಕರಾದರು.

ನಾಗಮಂಗಲ ತಾಲೂಕಿನ ಹೂಣಕೆರೆ ಗ್ರಾಮದ ಬಳಿಯ ಶ್ರೀರಂಗಪಟ್ಟಣ-ನಾಗಮಂಗಲ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಬೈಕ್‌ನಲ್ಲಿದ್ದ ಜೆಡಿಎಸ್​ ಕಾರ್ಯಕರ್ತ ಆನಂದ್ ಕುಮಾರ್, ಅಮ್ಮು ಹಾಗೂ ನಾಲ್ಕು ತಿಂಗಳ ಗಂಡು ಮಗು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಓದಿ:ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್​​ ಡಿಕ್ಕಿ: ನಾಲ್ಕು ತಿಂಗಳ ಮಗು ಸೇರಿ ಮೂವರು ದುರ್ಮರಣ

Last Updated : Sep 5, 2021, 6:53 PM IST

For All Latest Updates

TAGGED:

ABOUT THE AUTHOR

...view details