ಮಂಡ್ಯ:ಮಹಿಳೆಯೊಂದಿಗೆ ದುರ್ನಡತೆ ತೋರಿ, ನಾನೇನು ರೇಪ್ ಮಾಡಿದ್ನಾ ಎಂಬ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಮಂತ್ರಿ ಹೆಚ್ ಡಿ ಕುಮಾರಸ್ವಾಮಿ, 'ಹೆಣ್ಣು ಮಕ್ಕಳ ಮೇಲೆ ರೇಪ್ ಮಾಡಲ್ಲ. ಅವರ ನಡವಳಿಕೆನೇ ಬೇರೆ ಇದೆ' ಎಂದು ಲೇವಡಿ ಮಾಡಿದರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಇಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವಿಂದ ಲಿಂಬಾವಳಿ ಅವರು ಮಾಡೋದು ಬೇರೆ ಇದೆ. ಬಹುಶಃ ಈ ಹಿಂದೆ ಕೋರ್ಟ್‌ನಲ್ಲಿ ಯಾವುದೋ ಒಂದು ಕ್ಯಾಸೆಟ್ ಬಗ್ಗೆ ಸ್ಟೇ ತಂದ್ರಲ್ಲ, ಅದು ನೋಡಿದ್ರೆ ಅವರ ಬಗ್ಗೆ ಗೊತ್ತಾಗುತ್ತೆ ಎಂದು ವ್ಯಂಗ್ಯವಾಡಿದರು.
ಅಲ್ಲದೇ, ಯಾರಾದರೂ ತಪ್ಪು ಮಾಡಿದ್ದರೂ ಕೂಡ ಮನವಿ ಕೊಡಲು ಜನಪ್ರತಿನಿಧಿ ಬಳಿ ಬಂದರೆ ಗೌರವ ಕೊಡಬೇಕು. ಅರ್ಜಿ ಕೊಡಲು ಬಂದ ಮಹಿಳೆ ಬಗ್ಗೆ ಅಗೌರವಿತವಾಗಿ ನಡೆದುಕೊಂಡು ಬೆದರಿಸಿದ್ದಾರೆ. ಒಳಗಾಕಿ ಅನ್ನುವುದು ಒಬ್ಬ ಜನ ಪ್ರತಿನಿಧಿಗೆ ಆ ವರ್ತನೆ ಒಳ್ಳೆಯದಲ್ಲ ಎಂದು ಗರಂ ಆದರು.
ಹೆಣ್ಣುಮಕ್ಕಳ ಮೇಲೆ ರೇಪ್ ಮಾಡಲ್ಲ, ಅವರ ನಡವಳಿಕೆನೇ ಬೇರೆ ಇದೆ: ಲಿಂಬಾವಳಿ ವಿರುದ್ಧ ಹೆಚ್ಡಿಕೆ ಲೇವಡಿ ಇದೇ ವೇಳೆ ಮುರುಘಾ ಶ್ರೀಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ಸರ್ಕಾರ ಈ ವಿಚಾರದಲ್ಲಿ ಸರಿಯಾದ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಇದೊಂದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ. ಸರ್ಕಾರ ಜನರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ:ಮಹಿಳೆಯ ಜೊತೆ ದುರ್ನಡತೆ: ಶಾಸಕ ಲಿಂಬಾವಳಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ