ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ, ರೈತ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ತೀನಿ: ಹೆಚ್​ಡಿಕೆ - hd kumaraswamy

ಮಂಡ್ಯದಲ್ಲಿಂದು ಹೆಚ್.​ಡಿ.ಕುಮಾರಸ್ವಾಮಿ ಸಂಸದೆ ಸುಮಲತಾ ಅಂಬರೀಷ್​​ ವಿರುದ್ಧ ವಾಗ್ದಾಳಿ ನಡೆಸಿದರು.

hd-kumaraswamy-lashed-out-against-mp-sumalatha
ಈ ಬಾರಿ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ, ರೈತ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ತೀನಿ: ಹೆಚ್​ಡಿಕೆ ವಾಗ್ದಾಳಿ

By

Published : Apr 18, 2023, 9:25 PM IST

ಹೆಚ್.​ಡಿ.ಕುಮಾರಸ್ವಾಮಿ ಹೇಳಿಕೆ

ಮಂಡ್ಯ:ಜೆಡಿಎಸ್‌ ಪಕ್ಷವನ್ನು ಧೂಳೀಪಟ ಮಾಡ್ತೀನಿ ಎಂಬ ದುರಹಂಕಾರದ ಮಾತಿಗೆ ಮಂಡ್ಯದ ಜನ ಉತ್ತರ ಕೊಡುತ್ತಾರೆ ಎಂದು ಹೆಚ್.​ಡಿ.ಕುಮಾರಸ್ವಾಮಿ ಹೇಳಿದರು. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರೆ ಎಂದು ಹೇಳಿದವರು ಯಾರು.? ಚನ್ನಪಟ್ಟಣದ ಅಭ್ಯರ್ಥಿಯಾಗಿ ಬ್ಯಾಂಕ್ ಖಾತೆ ತೆರೆದಿದ್ದೇನೆ. ಚನ್ನಪಟ್ಟಣದ ವಂದಾರಗುಪ್ಪೆ ಶಾಖೆಯಲ್ಲಿ ಅಕೌಂಟ್ ಓಪನ್ ಆಗಿದೆ. ಮಂಡ್ಯದಲ್ಲಿ ಹೆಡ್ ಆಫೀಸ್ ಇರುವ ಕಾರಣ ಅದರಲ್ಲಿ ಉಲ್ಲೇಖಿಸಿದ್ದಾರೆ. ಮಂಡ್ಯದಲ್ಲಿ ಚುನಾವಣೆ ನಿಲ್ತೀನಿ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು.

ಮುಂದುವರೆದು ಮಾತನಾಡಿ, "ಸುಮಲತಾರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರಷ್ಟು ವರ್ಚಸ್ಸು ನನಗಿಲ್ಲ. ಮಂಡ್ಯಕ್ಕೆ ಅವರು ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಹಾಗಾಗಿ ಅವರ ಸವಾಲನ್ನು ನಾನು ನಿರಾಕರಣೆ ಮಾಡುತ್ತೇನೆ. ಈ ಬಾರಿ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ. ಸಾಮಾನ್ಯ ಕಾರ್ಯಕರ್ತ, ರೈತ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ತೀನಿ. ಇವರ ದುರಹಂಕಾರದ ಮಾತುಗಳಿಗೆ ಮಂಡ್ಯ ಜನ ಉತ್ತರ ಕೊಡ್ತಾರೆ" ಎಂದು ಕಿಡಿಕಾರಿದರು.

"ಅವರದು ದ್ವೇಷದ ರಾಜಕಾರಣ, ನನ್ನ ಸ್ಪರ್ಧೆಯಿಂದ 7 ಕ್ಷೇತ್ರಗಳಲ್ಲೂ ಪಕ್ಷಕ್ಕೆ ಅನುಕೂಲ ಇದೆ. ನಾನು ಸ್ಪರ್ಧೆ ಮಾಡದಿದ್ದರೂ ಮಂಡ್ಯ ಜನ ಜೆಡಿಎಸ್ ಪಕ್ಷವನ್ನು ಗೆಲ್ಲಿಸುತ್ತಾರೆ. ಅನಿವಾರ್ಯ ಅವಶ್ಯಕತೆ ಇದ್ದರೆ ದೇವೇಗೌಡರು ಮಂಡ್ಯ ಪ್ರಚಾರಕ್ಕೆ ಬರುತ್ತಾರೆ. ಇವತ್ತು ಅಥವಾ ನಾಳೆಯೊಳಗೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುತ್ತೇನೆ. ಹಾಸನದಲ್ಲಿ ನಮ್ಮ ಕುಟುಂಬದವರು ಸ್ಪರ್ಧೆ ಮಾಡುವ ಅಗತ್ಯ ಇಲ್ಲ. ಸಾಮಾನ್ಯ ಕಾರ್ಯಕರ್ತರಿಗೆ ಕೊಡ್ತೀವಿ ಎಂದು ಹೇಳಿದ್ದೆ, ಆ ಮಾತೇ ಮಂಡ್ಯಕ್ಕೂ ಅನ್ವಯ ಆಗಲಿದೆ" ಎಂದು ಹೇಳಿದರು.

ಇದನ್ನೂ ಓದಿ:ಮಂಡ್ಯದಲ್ಲಿ ಈ ಬಾರಿ ಬಿಜೆಪಿಗೆ ಸೆನ್ಸೇಷನಲ್ ಸರ್ಪ್ರೈಸ್‌ ರಿಸಲ್ಟ್: ಸುಮಲತಾ

"ಚನ್ನಪಟ್ಟಣದಲ್ಲಿ ನಿನ್ನೆ ನಾಮಪತ್ರ ಸಲ್ಲಿಸಿದ್ದೇನೆ. ಚನ್ನಪಟ್ಟಣದಲ್ಲಿ ಸಮರ್ಥ ಅಭ್ಯರ್ಥಿ ತಯಾರಾಗಿಲ್ಲದೇ ಇದ್ದರೆ ನಾನು ಮಂಡ್ಯದಲ್ಲಿ ಸ್ಪರ್ಧಿಸುತ್ತಿದ್ದೆ. ಕಾರ್ಯಕರ್ತರನ್ನು ಉಳಿಸಿ ಪಕ್ಷ ಕಟ್ಟಲು ಕಳೆದ ಬಾರಿ ಎರಡು ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧಿಸಿದ್ದೆ. ಈಗ ಆ ಅನಿವಾರ್ಯತೆ ಇಲ್ಲ ಎಂದರು. ಸುಮಲತಾ ಅವರದ್ದು ದುರಹಂಕಾರದ ಪರಮಾವಧಿ. ನಮಗೆ ಅವರ ಪತಿಯಿಂದ ಯಾವುದೇ ಅನುಕೂಲ ಆಗಿಲ್ಲ. ಆದರೆ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ. ಮಂಡ್ಯ ಜಿಲ್ಲೆಯ ಗೌರವ ಉಳಿಸಿದ್ದೇನೆ, ಅದಕ್ಕೆ ಅವರು ನನಗೆ ಕೊಡ್ತಿರುವ ಕಾಣಿಕೆ ಇದು. ಅವರ ಕಾಣಿಕೆ ಸ್ವೀಕಾರ ಮಾಡಲು ತಯಾರಾಗಿದ್ದೇನೆ" ಎಂದು ಸುಮಲತಾ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ:2 ಬಾರಿ ಸಮ್ಮಿಶ್ರ ಸರ್ಕಾರ ಮಾಡಿ ಸಾಕಷ್ಟು ಕಹಿ ಅನುಭವಿಸಿದ್ದೇವೆ, ಈ ಸಲ 123 ಸೀಟು ಬರುತ್ತೆ: ನಿಖಿಲ್ ಕುಮಾರಸ್ವಾಮಿ

ABOUT THE AUTHOR

...view details