ಕರ್ನಾಟಕ

karnataka

ETV Bharat / state

ಬಾಗಿನ ಅರ್ಪಣೆಗೆ ಬಂದವರು.. ಕೆರೆ ತುಂಬಿಸಿದ್ಯಾರು ಎಂಬ ವಿಷಯಕ್ಕಾಗಿ ಕಿತ್ತಾಟ...! ಗ್ರಾಮಸ್ಥರ ಛೀಮಾರಿ - mandya latest news

ಕೆರೆಗೆ ಬಾಗಿನ ಕಾರ್ಯಕ್ರಮಕ್ಕೆ ಜೆಡಿಎಸ್ ಮತ್ತು ಪ್ರಾಂತ ರೈತ ಸಂಘ, ನೀರಾವರಿ ಹೋರಾಟ ಸಮಿತಿ ಸದಸ್ಯರೂ ಕೂಡ ಈ ವೇಳೆ ಆಗಮಿಸಿದ್ದರು. ಈ ಸಂದರ್ಭ ನೀರು ತುಂಬಿಸಿದ್ದು ಯಾರೂ ಎಂಬ ಪ್ರಶ್ನೆ ಎದ್ದು, ಎರಡೂ ಗುಂಪಿನ ಸದಸ್ಯರು ಮಾತಿನ ಚಕಮಕಿ ನಡೆಸಿದ್ದಾರೆ.

ಮಾತಿನ ಚಕಮಕಿ ನಡೆಸಿದ ಸಂಘಟನೆಗಳು

By

Published : Oct 15, 2019, 5:11 PM IST

ಮಂಡ್ಯ: ಕೆರೆಗೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಪ್ರಾಂತ ರೈತ ಸಂಘದ ಮುಖಂಡರು ಮಾತಿನ ಚಕಮಕಿ ನಡೆಸಿದ ಘಟನೆ ಮಳವಳ್ಳಿ ತಾಲೂಕಿನ ಕಂಚುಗನಹಳ್ಳಿಯಲ್ಲಿ ನಡೆದಿದೆ.

ತುಂಬಿರುವ ಕೆರೆಗೆ ಬಾಗಿನ ಅರ್ಪಿಸಲು ಗ್ರಾಮಸ್ಥರು ಮುಂದಾಗಿದ್ದರು. ಬಾಗಿನ ಕಾರ್ಯಕ್ರಮಕ್ಕೆ ಜೆಡಿಎಸ್ ಮತ್ತು ಪ್ರಾಂತ ರೈತ ಸಂಘ, ನೀರಾವರಿ ಹೋರಾಟ ಸಮಿತಿ ಸದಸ್ಯರೂ ಕೂಡ ಈ ವೇಳೆ ಆಗಮಿಸಿದ್ದರು. ಈ ಸಂದರ್ಭ ನೀರು ತುಂಬಿಸಿದ್ದು ಯಾರೂ ಎಂಬ ಪ್ರಶ್ನೆ ಎದ್ದು, ಎರಡೂ ಗುಂಪಿನ ಸದಸ್ಯರು ಮಾತಿನ ಚಕಮಕಿ ನಡೆಸಿದ್ದಾರೆ.

ಕೆರೆಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಸಿದ ಸಂಘಟನೆಗಳು

ಬಾಗಿನ ಅರ್ಪಿಸುವ ದೃಶ್ಯ ನೋಡಲು ಬಂದಿದ್ದ ಗ್ರಾಮಸ್ಥರು ಎರಡೂ ಕಡೆಯವರ ಜಗಳ ನೋಡಿಕೊಂಡು ತಬ್ಬಿಬ್ಬಾಗಿದ್ದಾರೆ. ನೀರು ಯಾರೇ ತುಂಬಿಸಲಿ, ಇದರಿಂದ ಅನುಕೂಲ ಆಗುವುದು ರೈತರಿಗೆ. ಆದರೆ, ನೀರು ತುಂಬಿಸುವ ವಿಚಾರವಾಗಿ ರಾಜಕೀಯ ಮಾಡಲು ಬಂದ ಎರಡೂ ಗುಂಪಿಗೂ ಗ್ರಾಮಸ್ಥರು ಛೀಮಾರಿ ಹಾಕಿದ ಘಟನೆಯೂ ನಡೆದಿದೆ.

ABOUT THE AUTHOR

...view details