ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆಯುತ್ತಿರುವ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಸಂಕೀರ್ತನ ಯಾತ್ರೆ ಪ್ರಾರ್ಥನಾ ಸ್ಥಳವೊಂದರ ಬಳಿ ಆಗಮಿಸುತ್ತಿದ್ದಂತೆ ಅದರ ಒಳಗೆ ನುಗ್ಗಲು, ನೂರಾರು ಹನುಮ ಮಾಲಾಧಾರಿಗಳು ಯತ್ನಿಸಿದರು. ಬ್ಯಾರಿಕೇಡ್ ಹಾರಿ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ.
ಪ್ರಾರ್ಥನಾ ಸ್ಥಳದತ್ತ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು.. ಪೊಲೀಸರಿಂದ ಬ್ರೇಕ್ - ಸಂಕೀರ್ತನ ಯಾತ್ರೆ
ನೂರಾರು ಹನುಮ ಮಾಲಾಧಾರಿಗಳು ಪ್ರಾರ್ಥನಾ ಸ್ಥಳವೊಂದರತ್ತ ನುಗ್ಗಲು ಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
![ಪ್ರಾರ್ಥನಾ ಸ್ಥಳದತ್ತ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು.. ಪೊಲೀಸರಿಂದ ಬ್ರೇಕ್ Hanuman Maladharis](https://etvbharatimages.akamaized.net/etvbharat/prod-images/768-512-17111190-thumbnail-3x2-bin.jpg)
ಮಂದಿರವೊಂದರತ್ತ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು
ಪ್ರಾರ್ಥನಾ ಸ್ಥಳದತ್ತ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು.. ಪೊಲೀಸರಿಂದ ಬ್ರೇಕ್
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಮೂಡಲು ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಂಕೀರ್ತನ ಯಾತ್ರೆ ನಡೆಯಲಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ದಾರಿ ಉದ್ದಕ್ಕೂ ಸಿಸಿಟಿವಿ ಅಳವಡಿಕೆ ಮಾಡುವುದರೊಂದಿಗೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಸುಮಾರು 10,000 ಹನುಮ ಮಾಲಾಧಾರಿಗಳು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.