ಮಂಡ್ಯ: ಕೆ.ಆರ್. ಸಾಗರ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನೋರ್ವ ಆನ್‌ಲೈನ್ ಪಠ್ಯದ ಜೊತೆಗೆ ಅಶ್ಲೀಲ ಫೋಟೋ ರವಾನೆ ಮಾಡಿದ್ದು, ಆತನನ್ನು ಸೇವೆಯಿಂದ ಬಿಡುಗಡೆಗೊಳಿಸಿರುವ ಘಟನೆ ಶ್ರೀರಂಗಪಟ್ಟದಲ್ಲಿ ನಡೆದಿದೆ.
ಹಲವು ವರ್ಷಗಳಿಂದ ಕೆ.ಆರ್. ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸೇವೆಯಲ್ಲಿದ್ದ ಅತಿಥಿ ಉಪನ್ಯಾಸಕರೊಬ್ಬ ಕಳೆದ ಸೋಮವಾರ ವಿದ್ಯಾರ್ಥಿಗಳಿಗೆ ವಾಟ್ಸ್ಆ್ಯಪ್ ಗ್ರೂಪ್ನಲ್ಲಿದ್ದ ಆನ್‌ಲೈನ್ ಪಠ್ಯ ಕಳುಹಿಸುವುದರ ಜೊತೆಗೆ ಅಶ್ಲೀಲ ಫೋಟೋ ಕಳುಹಿಸಿದ್ದಾರೆ ಎನ್ನಲಾಗ್ತಿದೆ.
ಆನ್‌ಲೈನ್ ಪಠ್ಯದ ಜೊತೆಗೆ ಅಶ್ಲೀಲ ಫೋಟೋ ಕಳಿಸಿದ ಪೋಲಿ: ಅತಿಥಿ ಉಪನ್ಯಾಸಕ ಮನೆಗೆ - guest lecturer sent vulgar image to students
ಮಂಡ್ಯ ಜಿಲ್ಲೆಯ ಕಾಲೇಜೊಂದರ ಅತಿಥಿ ಉಪನ್ಯಾಸಕರೊಬ್ಬರು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಆನ್‌ಲೈನ್ ಪಠ್ಯ ಕಳುಹಿಸುವುದರ ಜೊತೆಗೆ ಅಶ್ಲೀಲ ಫೋಟೋ ಕಳುಹಿಸಿದ ಹಿನ್ನೆಲೆ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
ಆನ್‌ಲೈನ್ ಪಠ್ಯದ ಜೊತೆಗೆ ಅಶ್ಲೀಲ ಫೋಟೋ ರವಾನಿಸಿದ ಅತಿಥಿ ಉಪನ್ಯಾಸಕ
ಈ ವಿಷಯವನ್ನು ಇತರೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲೆ ಹಂಸವೇಣಿ ಅವರ ಗಮನಕ್ಕೆ ತಂದಿದ್ದಾರೆ. ನಂತರ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರ ಜೊತೆ ಚರ್ಚಿಸಿದ ಪಾಂಶುಪಾಲರಾದ ಹಂಸವೇಣಿ, ನಿರ್ದೇಶನದಂತೆ ಕಾಲೇಜಿನ ಹಿತದೃಷ್ಟಿಯಿಂದ ಆ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಕಾರಿನಲ್ಲೇ ಸಿಲುಕಿ ಪ್ರಾಣತೆತ್ತ ಆರು ಜನ!