ಮಂಡ್ಯ:ಭಾವನೆಗಳು ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಅದು ಪ್ರಾಣಿ-ಪಕ್ಷಿಗಳಲ್ಲೂ ಇವೆ. ಇದಕ್ಕೆ ಈ ದೃಶ್ಯಗಳೇ ಸಾಕ್ಷಿ. ತನ್ನ ಸಂಗಾತಿಯೋ ಅಥವಾ ಗುಂಪಿನ ಸದಸ್ಯನನ್ನೋ ಕಳೆದುಕೊಂಡ ಹಕ್ಕಿಗಳು, ಹಕ್ಕಿಯ ಕಳೇಬರದ ಮುಂದೆ ತನ್ನದೇ ಭಾಷೆಯಲ್ಲಿ ರೋಧಿಸುವ ದೃಶ್ಯ ಮನ ಕಲಕುವಂತಿದೆ.
ಅಗಲಿದ ಸದಸ್ಯನ ಬಿಟ್ಟೋಗದ ಮೈನಾ ಹಕ್ಕಿಗಳು... ಮನಕಲುಕಿದ ಪಕ್ಷಿಗಳ ಮೂಕರೋಧನೆ - undefined
ಮೃತ ಸದಸ್ಯನ ಬಿಟ್ಟು ಕದಲದ ಹಕ್ಕಿಗಳು. ಅಗಲಿದ ಹಕ್ಕಿಯ ಕಳೇಬರದ ಮುಂದೆ ಮೈನಾ ಹಕ್ಕಿಗಳ ಮೂಕರೋಧನೆ. ರಂಗನತಿಟ್ಟು ಬಳಿ ರಸ್ತೆಯಲ್ಲಿ ಮನಕಲುಕುವ ದೃಶ್ಯ.
![ಅಗಲಿದ ಸದಸ್ಯನ ಬಿಟ್ಟೋಗದ ಮೈನಾ ಹಕ್ಕಿಗಳು... ಮನಕಲುಕಿದ ಪಕ್ಷಿಗಳ ಮೂಕರೋಧನೆ](https://etvbharatimages.akamaized.net/etvbharat/prod-images/768-512-3458894-thumbnail-3x2-mng.jpg)
ಮೂಕರೋಧನೆ ತೋರಿದ ಮೈನಾ ಹಕ್ಕಿಗಳು
ಶ್ರೀರಂಗಪಟ್ಟಣದ ರಂಗನತಿಟ್ಟು ಬಳಿಯ ರಸ್ತೆಯಲ್ಲಿ ಹೃದಯ ಕಲಕುವ ಘಟನೆ ಕಂಡುಬಂದಿದೆ. ರಸ್ತೆ ಬಳಿ ಮೃತ ಸಂಗಾತಿಯ ಕಳೇಬರವನ್ನುಒಂದು ತಾಸು ಕಾದ ಮೈನಾಗಳ ದೃಶ್ಯ ಅಂತಃಕರಣಕ್ಕೆ ಸಾಕ್ಷಿಯಾಯಿತು. ಯಾವಾಗಲೂ ಜೊತೆಯಾಗಿಯೇ ಜೀವಿಸುವ ಮೈನಾ ಹಕ್ಕಿಗಳ ದುಃಖ ಕಂಡ ಜನರು ಮಮ್ಮಲ ಮರುಗಿದರು.
ಮೂಕರೋಧನೆ ತೋರಿದ ಮೈನಾ ಹಕ್ಕಿಗಳು
ಸ್ನೇಹಿತನನ್ನು ಕಳೆದುಕೊಂಡ ಮೈನಾ ಹಕ್ಕಿಗಳ ಮೂಕ ರೋಧನೆ ಮನುಷ್ಯನ ಪ್ರೀತಿ ಹೇಗೆ ಇರಬೇಕು ಎಂಬುದನ್ನು ತೋರಿಸುವ ರೀತಿ ಇತ್ತು. ಅಗಲಿದ ಸಂಗಾತಿಗಾಗಿ ಮೈನಾ ಪಕ್ಷಿಗಳ ಅಂತಃಕರಣ ಮಿಡಿದ ದೃಶ್ಯ ಎಂಥವರಲ್ಲೂ ಕಣ್ಣೀರು ತರಿಸುವಂತಿತ್ತು.