ಮಂಡ್ಯ:ಕುರುಕ್ಷೇತ್ರ ಚಿತ್ರವನ್ನು ದಚ್ಚು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ದರ್ಶನ್ಗೆ ಇದು 50ನೇ ಚಿತ್ರವಾದ್ದರಿಂದ 50 ಜೋಡೆತ್ತುಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜೊತೆಗೆ 50 ಸಾವಿರ ಲಡ್ಡುಗಳನ್ನು ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಹಂಚಲಾಯಿತು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಿಂದ 50 ಕಲಾ ತಂಡಗಳ ಜೊತೆಗೆ 50 ಆಟೋಗಳು ಹಾಗೂ 50 ಜೋಡೆತ್ತುಗಳ ಮೆರವಣಿಗೆ ಮೂಲಕ ಸಂಜಯ ವೃತ್ತದವರೆಗೂ ಅದ್ಧೂರಿ ಮೆರವಣಿಗೆ ಮಾಡಿ 'ಕುರುಕ್ಷೇತ್ರ'ಕ್ಕೆ ಸ್ವಾಗತ ಕೋರಲಾಯಿತು ಹಾಗೂ ನಗರದ ಮೂರು ಚಿತ್ರ ಮಂದಿರಗಳಲ್ಲಿ 'ಕುರುಕ್ಷೇತ್ರ' ಬಿಡುಗಡೆಯಾಗಿದೆ.