ಮಂಡ್ಯ: ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದು, ಅದಕ್ಕೂ ಮೊದಲೇ ಸದಸ್ಯತ್ವವನ್ನು ಹರಾಜು ಹಾಕಿದ ವಿಡಿಯೋವೊಂದು ಜಿಲ್ಲೆಯಲ್ಲಿ ಫುಲ್ ವೈರಲ್ ಆಗ ಬಾರಿ ಚರ್ಚೆ ಆಗಿತ್ತು. ಈ ಹರಾಜು ಪ್ರಕ್ರಿಯೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಚುನಾವಣಾ ಇಲಾಖೆ ತನಿಖೆಗೆ ಆದೇಶಿಸಿದೆ. ನೈಜತೆ ಪರಿಶೀಲಿಸಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಅವರು ನಾಗಮಂಗಲ ತಹಶೀಲ್ದಾರ್ಗೆ ಪತ್ರದ ಮೂಲಕ ಆದೇಶ ನೀಡಿದ್ದರಿಂದ ಗ್ರಾಮದ 10 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗ್ರಾ.ಪಂ. ಸದಸ್ಯತ್ವ ಹರಾಜು ಪ್ರಕರಣ; 10 ಜನರ ಮೇಲೆ ಎಫ್ಐಆರ್ ಈ ಸುದ್ದಿಯನ್ನೂ ಓದಿ:ಮಂಡ್ಯ ಗ್ರಾಪಂ ಸದಸ್ಯ ಸ್ಥಾನಗಳ ಹರಾಜಿನಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ದೂರು
ನಾಗಮಂಗಲ ತಾಲೂಕಿನ ಗ್ರಾಮ ಪಂಚಾಯತ್ವೊಂದರ ವಾರ್ಡ್ನ 3 ಸದಸ್ಯ ಸ್ಥಾನಗಳ ಆಯ್ಕೆಗೆ ಹರಾಜು ಕೂಗಲಾಗಿತ್ತು. ಊರಿನ ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮದ ಹಿರಿಯರು ಪಂಚಾಯತ್ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಲುವಾಗಿ ಒಂದು ಸ್ಥಾನವನ್ನು 8.40 ಲಕ್ಷಕ್ಕೆ ಹರಾಜು ಕೂಗಲಾಗಿದೆ ಎಂಬ ಮಾಹಿತಿ ದೊರೆತಿದೆ. ಹೀಗೆ 3 ಸ್ಥಾನಗಳನ್ನು ಹರಾಜು ಕೂಗಲಾಗಿತ್ತು. ಈ ಪ್ರಕರಣ ಸಂಬಂಧ ಗ್ರಾಮದ 10 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ:ಮಂಡ್ಯದಲ್ಲೂ ಗ್ರಾ.ಪಂ. ಸದಸ್ಯತ್ವ ಹರಾಜು - ವಿಡಿಯೋ ವೈರಲ್
ಒಟ್ಟಾರೆ ಪಂಚಾಯತ್ ಸದಸ್ಯ ಸ್ಥಾನಗಳನ್ನು ಹಣಬಲದಿಂದ ಖರೀದಿಸಲು ಹೊರಟಿದ್ದವರಿಗೆ ಹಾಗೂ ಹರಾಜು ಹಾಕಿದವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಮುಂದೆ ಯಾರೂ ಕೂಡ ಸದಸ್ಯ ಸ್ಥಾನಗಳಿಗೆ ಹರಾಜು ಕೂಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.