ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ.. ಅಂತಿಮ ಕಣದಲ್ಲಿ 4,010 ಅಭ್ಯರ್ಥಿಗಳು - Mandya latest update news

ಮದ್ದೂರು ತಾಲೂಕಿನ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿದೆ. ಮಂಡ್ಯ 597, ಮದ್ದೂರು 538, ಮಳವಳ್ಳಿ ತಾಲೂಕಿನ 511 ಸೇರಿದಂತೆ 1,646 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ..

Mandya
ಗ್ರಾ.ಪಂ ಚುನಾವಣೆ: ಅಂತಿಮ ಕಣದಲ್ಲಿ 4,010 ಅಭ್ಯರ್ಥಿಗಳು

By

Published : Dec 16, 2020, 12:54 PM IST

ಮಂಡ್ಯ :ಮೊದಲ ಹಂತದ ಗ್ರಾಪಂ ಚುನಾವಣೆಗೆ ಮಂಡ್ಯ, ಮಳವಳ್ಳಿ, ಮದ್ದೂರು ತಾಲೂಕಿನಲ್ಲಿ ಅಂತಿಮ ಕಣದಲ್ಲಿ 4,010 ಅಭ್ಯರ್ಥಿಗಳು ಉಳಿದಿದ್ದಾರೆ.

ಗ್ರಾಪಂ ಚುನಾವಣೆ : ಅಂತಿಮ ಕಣದಲ್ಲಿ 4,010 ಅಭ್ಯರ್ಥಿಗಳು

ಮೊದಲ ಹಂತದ ಚುನಾವಣೆಯಲ್ಲಿ 126 ಗ್ರಾಮ ಪಂಚಾಯತ್‌ಗಳ 2,011 ಸ್ಥಾನಗಳಲ್ಲಿ, 364 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. 1,646 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಂಡ್ಯ ತಾಲೂಕಿನಲ್ಲಿ 116, ಮದ್ದೂರು ತಾಲೂಕಿನ 147, ಮಳವಳ್ಳಿ ತಾಲೂಕಿನ 101 ಸೇರಿ 364 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ.

ಮದ್ದೂರು ತಾಲೂಕಿನ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿದೆ. ಮಂಡ್ಯ 597, ಮದ್ದೂರು 538, ಮಳವಳ್ಳಿ ತಾಲೂಕಿನ 511 ಸೇರಿದಂತೆ 1,646 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಪರಿಶಿಷ್ಟ ಜಾತಿಯ 698, ಪರಿಶಿಷ್ಟ ಪಂಗಡದ 152, ಹಿಂದುಳಿದ ಎ ವರ್ಗದ 678, ಹಿಂದುಳಿದ ಬಿ ವರ್ಗದ 195, ಸಾಮಾನ್ಯ ವರ್ಗದ 2,287 ಮಂದಿ ಸೇರಿ ಒಟ್ಟು 4,010 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ABOUT THE AUTHOR

...view details