ಮಂಡ್ಯ :ಇಂದು ಸಂಜೆಯೊಳಗೆ ತಮಿಳುನಾಡಿಗೆ ಹರಿಬಿಡುತ್ತಿರುವ ಕಾವೇರಿ ನೀರು ನಿಲ್ಲಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ತೀರ್ಮಾನ ತೆಗೆದುಕೊಂಡಿದೆ ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಿಳಿಸಿದರು. ನಾವು ಕಳೆದೊಂದು ವಾರದಿಂದ CWC ನೀಡಿದ್ದ ಸೂಚನೆ ಮೇರೆಗೆ ಸುಮಾರು 12 ಸಾವಿರ ಟಿಎಂಸಿ ನೀರು ಬಿಟ್ಟಿದ್ದೇವೆ. ಇನ್ನೊಂದೆಡೆ, ಸುಪ್ರೀಂ ಕೋರ್ಟ್ ಮುಂದೆ ತಮಿಳುನಾಡು ದೂರಿನ ಅರ್ಜಿ ಬಾಕಿಯಿದ್ದು, ಕೋರ್ಟ್ ಯಾವ ಸೂಚನೆ ಕೊಡುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಕೋರ್ಟ್ ಕೊಡುವ ಆದೇಶಕ್ಕೆ ನಾವು ಬದ್ದ. ಅದಕ್ಕನುಗುಣವಾಗಿ ಇಂದು ಸಂಜೆಯೊಳಗೆ ತಮಿಳುನಾಡಿಗೆ ನೀರು ನಿಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಈ ವರ್ಷ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದೆ. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿಗೆ ಅನುಗುಣವಾಗಿ ಜೂನ್ನಲ್ಲಿ 10 ಟಿಎಂಸಿ, ಜುಲೈನಲ್ಲಿ 34 ಟಿಎಂಸಿ, ಅಗಸ್ಟ್‌ನಲ್ಲಿ 50 ಟಿಎಂಸಿ ನೀರು ಕೊಡಲು ಒತ್ತಡವಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದೇವೆ. ನೀರು ಕೊಡುವ ಬಗ್ಗೆ ಹಿಂದಿನಿಂದಲೂ ತೀರ್ಮಾನವಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ದೇವೇಗೌಡರು, ಸಿದ್ದರಾಮಯ್ಯ ಸಿಎಂ ಆಗಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ.
ಇದನ್ನೂ ಓದಿ :ಕಾವೇರಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಂಪುಟ ಸಭೆ ತೀರ್ಮಾನ