ಮಂಡ್ಯ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಈ ಗ್ರಾಮಸ್ಥರು ಮಾತ್ರ ಶಾಲೆ ಉಳಿವಿಗಾಗಿ ನಿರಂತರ ಹೋರಾಟ ಮಾಡಿದ್ದರು. ಮುಚ್ಚಿದ ಶಾಲೆ ಆರಂಭಿಸಲು ಸರ್ಕಾರದ ಮಟ್ಟದಲ್ಲಿ ಲಾಬಿ ಕೂಡ ಮಾಡಿದ್ದರು. ಕೊನೆಗೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಮತ್ತೊಮ್ಮೆ ಶಾಲೆ ಆರಂಭವಾಗಿದೆ.
ಮುಚ್ಚಿದ್ದ ಸರ್ಕಾರಿ ಶಾಲೆಗೆ ಮರುಜೀವ ಕೊಟ್ಟ ಗ್ರಾಮಸ್ಥರು!
ಹೆಚ್ಚು ಮಕ್ಕಳಿಲ್ಲ ಎಂದು ಮುಚ್ಚಿದ್ದ ತರೀಕೆರೆ ಸರ್ಕಾರಿ ಶಾಲೆ ಗ್ರಾಮಸ್ಥರ ಒತ್ತಾಯದ ಮೇರೆಗೆ ಮತ್ತೆ ಪುನರಾರಂಭವಾಗಿದೆ.
ಹೌದು, ಮದ್ದೂರು ತಾಲೂಕಿನ ತರೀಕೆರೆ ಕಾಲೋನಿಯ ಸರ್ಕಾರಿ ಶಾಲೆಗೆ ಇಂದು ಶಾಸಕ ಸುರೇಶ್ ಗೌಡ ಮರು ಚಾಲನೆ ನೀಡಿದ್ರು. ಮಕ್ಕಳಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯನ್ನು ಮುಚ್ಚಿದ್ದರು. ಸ್ಥಳೀಯವಾಗಿ ಖಾಸಗಿ ಶಾಲೆ ತೆರೆದಿದ್ದರಿಂದ ವಿದ್ಯಾರ್ಥಿಗಳ ಕೊರತೆ ಉಂಟಾಗಿತ್ತು. ಆದರೆ ಗ್ರಾಮದಲ್ಲಿ ಇದ್ದ ಶಾಲೆ ಉಳಿಸಿಕೊಳ್ಳಲೇಬೇಕು ಎಂದು ಗ್ರಾಮಸ್ಥರು ನಿರ್ಧರಿಸಿ ಶಾಲೆಯನ್ನು ಪುನಾರಂಭಿಸಿದ್ದಾರೆ.
ಗ್ರಾಮಸ್ಥರ ಒತ್ತಾಸೆ ಮೇರೆಗೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಾಸಕ ಸುರೇಶ್ ಗೌಡ ಇಂದು ಚಾಲನೆ ನೀಡಿದ್ದಾರೆ. 13 ಮಕ್ಕಳು ಶಾಲೆಗೆ ಸೇರಿಕೊಂಡ ಹಿನ್ನೆಲೆಯಲ್ಲಿ ಶಾಲೆಗೆ ಮರು ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯದ ಪರಿಕರಗಳನ್ನು ನೀಡಿ ಸುರೇಶ್ ಗೌಡ ಶುಭ ಕೋರಿದ್ದಾರೆ.