ಕರ್ನಾಟಕ

karnataka

ETV Bharat / state

ಮಂಡ್ಯ ರೈತರ ಮನವಿಗೆ ಸ್ಪಂದಿಸಿದ ಸರ್ಕಾರ... ಕೆಆರ್​ಎಸ್​ ನಿಂದ ನಾಲೆಗಳಿಗೆ ನೀರು - mandya canals

ಕಟ್ಟು ಪದ್ಧತಿಯಲ್ಲಿ ಸರ್ಕಾರ ನಾಲೆಗಳಿಗೆ ನೀರನ್ನು ಹರಿಸಿದ್ದು, ರೈತರು ಬೆಳೆಗಳಿಗೆ ನೀರು ಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಹೇಳಿದೆ.

canals
ನಾಲೆಗೆ ನೀರು

By

Published : Feb 13, 2020, 12:49 PM IST

ಮಂಡ್ಯ: ಜಿಲ್ಲೆಯಲ್ಲಿ ಕಬ್ಬು ಮತ್ತು ಭತ್ತದ ಬೆಳೆ ರಕ್ಷಣೆಗಾಗಿ ರಾಜ್ಯ ಸರ್ಕಾರ ಕೆಆರ್​ಎಸ್​ ನಿಂದ ಇಂದು ನಾಲೆಗಳಿಗೆ ನೀರನ್ನು ಹರಿಸಿದೆ.

ಬೆಳೆ ರಕ್ಷಣೆಗಾಗಿ ರೈತರು ನೀರು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ರೈತರ ಬೇಡಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೀರನ್ನು ಬಿಡುಗಡೆ ಮಾಡಿದೆ. ಕಟ್ಟು ಪದ್ಧತಿಯಲ್ಲಿ ನೀರು ಬಿಡುಗಡೆಯಾಗಿದ್ದು, ರೈತರು ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಿಕೊಳ್ಳುವಂತೆ ತಿಳಿಸಿದೆ.

ಕೆಲವು ದಿನಗಳ ಹಿಂದೆ ರೈತ ಮುಖಂಡರು ನೀರು ಬಿಡದೇ ಇದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದ್ದರು. ಮನವಿ ಹಿನ್ನೆಲೆ ಸಚಿವ ನಾರಾಯಣಗೌಡ ಸಿಎಂ ಬಳಿ ರೈತರ ಸಮಸ್ಯೆ ಹೇಳಿಕೊಂಡಿದ್ದರು. ಸಮಸ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆ.ಆರ್.ಎಸ್ ನಿಂದ ನೀರು ಬಿಡಲು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಟ್ಟು ನೀರು ಬಿಟ್ಟಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details