ಕರ್ನಾಟಕ

karnataka

ETV Bharat / state

'ಅಮಾನತುಗೊಂಡವರನ್ನ ಕರೆತಂದ್ರೆ ನಾವೇನೂ ಜಗ್ಗಲ್ಲ-ಬಗ್ಗಲ್ಲ.. ಈ ಸರ್ಕಾರ ಹಿಟ್ಲರ್ ತರ ಇದೆ..' - ಚಾಲಕರ ನೇಮಕ

ನಮ್ಮ ಪರ ನಿಂತ ಕೋಡಿಹಳ್ಳಿ ಚಂದ್ರಶೇಖರ್ ಬಂಧನ ಮಾಡುವುದು ಸರಿಯಲ್ಲ. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ, ನಮ್ಮ ಹೋರಾಟ ನ್ಯಾಯಪರವಾಗಿರುತ್ತದೆ. ನಮ್ಮ ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ..

ಮಂಡ್ಯ
ಮಂಡ್ಯ

By

Published : Apr 11, 2021, 8:47 PM IST

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳು ಸಂಚಾರ ಆರಂಭಿಸಿವೆ. ಮಂಡ್ಯದಿಂದ ಮೈಸೂರು, ಮದ್ದೂರು, ನಾಗಮಂಗಲ, ಪಾಂಡವಪುರ ಕಡೆಗೆ ಸಂಚಾರ ಆರಂಭಿಸಿ ಡ್ರೈವರ್ ಕಮ್ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಂಡ್ಯದಿಂದ ಇಂದು 6 ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಮಾಡುತ್ತಿವೆ. ಅಮಾನತುಗೊಂಡ ಚಾಲಕರನ್ನ ಕರೆ ತಂದು ಕೆಲಸ ಮಾಡಿಸುತ್ತಿದ್ದಾರೆ. ಸದ್ಯ ಸಾರಿಗೆ ನೌಕರರ ಸಂಘದ ತಾಳಶಾಸನ್ ಮೋಹನ್ ಆಕ್ಷೇಪ ಮಾಡಿದ್ದು, ನಿಜವಾದ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಬರ್ತಿಲ್ಲ. ಬೇರೆಯವರನ್ನ ಕರೆ ತಂದು ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೇಲ್ಮಟ್ಟದ ಅಧಿಕಾರಿಗಳು ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡ್ತಿದ್ದಾರೆ. ಇದು ನಮ್ಮ ಸಂಸ್ಥೆಗೆ ಗೌರವ ತರುವ ಕೆಲಸವಲ್ಲ. ಕೆಲವು ಪ್ರಕರಣ ಬಗೆಹರಿಸುವಂತೆ ಆಮಿಷವೊಡ್ಡಿ ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರ ಹಿಟ್ಲರ್ ತರ ವರ್ತಿಸುತ್ತಿದೆ ಎಂದು ಆರೋಪಿಸಿದರು.

ನಮ್ಮ ಪರ ನಿಂತ ಕೋಡಿಹಳ್ಳಿ ಚಂದ್ರಶೇಖರ್ ಬಂಧನ ಮಾಡುವುದು ಸರಿಯಲ್ಲ. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ, ನಮ್ಮ ಹೋರಾಟ ನ್ಯಾಯಪರವಾಗಿರುತ್ತದೆ. ನಮ್ಮ ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಯಾವ ಅಸ್ತ್ರಗಳು ಕೂಡ ವರ್ಕ್ ಆಗಲ್ಲ, ನಾವು ಯಾವುದಕ್ಕೂ ಬಗ್ಗಲ್ಲ ಎಂದು ಎಚ್ಚರಿಸಿದ್ದಾರೆ.

ABOUT THE AUTHOR

...view details