ಮಂಡ್ಯ:ಮನೆ ಬಳಿ ನಿಲ್ಲಿಸಿದ್ದ ಗೂಡ್ಸ್ ಆಟೋದ ಚಕ್ರಗಳು ಹಾಗೂ ಹಸುವನ್ನು ದುಷ್ಕರ್ಮಿಗಳು ಕಳವು ಮಾಡಿದ ಘಟನೆ ತಾಲೂಕಿನ ನೊದೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ರಾತ್ರೋರಾತ್ರಿ ಆಟೋ ಚಕ್ರ-ಹಸು ಕದ್ದ ಖದೀಮರು - ಮನೆ ಬಳಿ ನಿಲ್ಲಿಸಿದ್ದ ಗೂಡ್ಸ್ ಆಟೋದ ಚಕ್ರಗಳು ಹಾಗೂ ಇಲಾಖೆಯ ಹಸು ಕಳ್ಳತನ
ಮನೆ ಬಳಿ ನಿಲ್ಲಿಸಿದ್ದ ಗೂಡ್ಸ್ ಆಟೋದ ಚಕ್ರಗಳು ಹಾಗೂ ಹಸುವನ್ನು ದುಷ್ಕರ್ಮಿಗಳು ಕಳವು ಮಾಡಿದ ಘಟನೆ ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಹಸುನೂ ಕದ್ರು,ಗೂಡ್ಸ್ ಆಟೋ ಚಕ್ರನೂ ಕದ್ರು.
ಗ್ರಾಮದ ರಘು ಎಂಬವರಿಗೆ ಸೇರಿದ ಆಟೋದ ಹಿಂಬದಿಯ ಎರಡೂ ಚಕ್ರಗಳನ್ನು ಕಳವು ಮಾಡಲಾಗಿದ್ದು, ಇದರ ಜೊತೆಗೆ ಲಿಂಗೇಗೌಡ ಎಂಬುವರಿಗೆ ಸೇರಿದ ಹಸುವನ್ನು ಕಳವು ಮಾಡಲಾಗಿದೆ.
ಲಿಂಗೇಗೌಡರು ತಮ್ಮ ಮನೆ ಬಳಿ ಕಟ್ಟಿ ಹಾಕಿದ್ದ ಹಸುವನ್ನು ರಾತ್ರೋರಾತ್ರಿ ಕಳವು ಮಾಡಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.