ಮಂಡ್ಯ: ಪ್ರೇಮಿಗಳ ನಡುವೆ ವೈಮನಸ್ಸು ಉಂಟಾಗಿ ಯುವತಿ ನೇಣಿಗೆ ಶರಣಾಗಿರುವ ಘಟನೆ ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ.
ಸೋನಿಕಾ (19) ಆತ್ಮಹತ್ಯೆಗೆ ಶರಣಾದ ಯುವತಿ. ಗ್ರಾಮದ ನಾಗಲಿಂಗ ಮಹಾದೇವಿ ಎಂಬುವರ ಪುತ್ರಿ ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಸೋನಿಕಾ ಹಾಗೂ ಅದೇ ಗ್ರಾಮದ ಮಹದೇವು ಎಂಬುವರ ಪುತ್ರ ಮಂಜಪ್ಪಗೌಡ ಕಳೆದ 1 ವರ್ಷಗಳಿಂದಲೂ ಪ್ರೀತಿಸುತ್ತಿದ್ದರು.
ತಡರಾತ್ರಿ ಸೋನಿಕಾ ಮೊಬೈಲ್ಗೆ ಕರೆ ಮಾಡಿದ ಮಂಜಪ್ಪಗೌಡ ಆಕೆಯೊಂದಿಗೆ ಮಾತನಾಡುವಾಗ ಮಾತಿಗೆ ಮಾತು ಬೆಳೆದು ಬೆದರಿಕೆ ಹಾಕಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಯುವತಿ ತಂದೆ ನಾಗಲಿಂಗರವರು ನೀಡಿದ ದೂರಿನ ಮೇರೆಗೆ ಮದ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಪ್ರೇಮಿ ಜೊತೆ ಫೋನ್ನಲ್ಲಿ ಕಿರಿಕ್: ನೇಣಿಗೆ ಕೊರಳೊಡ್ಡಿದ 19ರ ಯುವತಿ - ನೇಣು ಬಿಗಿದುಕೊಂಡು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಲವರ್ ಜೊತೆ ಜಗಳ ಮಾಡಿಕೊಂಡು ಮನನೊಂದ 19 ವರ್ಷದ ಯುವತಿ ನೇಣಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ವ್ಯಾಪ್ತಿಯ ಗ್ರಾಮವೊಂದರಲ್ಲಿ ಜರುಗಿದೆ.
ನೇಣಿಗೆ ಕೊರಳೊಡ್ಡಿದ 19ರ ಯುವತಿ
Last Updated : Jan 30, 2021, 6:52 PM IST