ಕರ್ನಾಟಕ

karnataka

ETV Bharat / state

ಕಾವೇರಿ‌ ನದಿಗೆ ಕೋವಿಡ್​​ನಿಂದ ಮೃತಪಟ್ಟವರ ಅಸ್ಥಿ: ರಸ್ತೆ ತಡೆದು ಸ್ಥಳೀಯರ ಆಕ್ರೋಶ - ಕಾವೇರಿ‌ ನದಿಗೆ ಕೋವಿಡ್​​ನಿಂದ ಮೃತಪಟ್ಟವರ ಅಸ್ಥಿ ಬಿಡುತ್ತಿರುವುದನ್ನು ವಿರೋಧಿಸಿ ರಸ್ತೆತಡೆ

ಕಾವೇರಿ‌ ನದಿಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಸ್ಥಿ ಬಿಡುತ್ತಿರುವುದನ್ನು ವಿರೋಧಿಸಿ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ ರಸ್ತೆಗೆ ಮರದ ತುಂಡುಗಳನ್ನು ಹಾಕಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Mandya
ಕಾವೇರಿ‌ ನದಿಗೆ ಕೋವಿಡ್​​ನಿಂದ ಮೃತಪಟ್ಟವರ ಅಸ್ಥಿ ಬಿಡುತ್ತಿರುವುದನ್ನು ವಿರೋಧಿಸಿ ರಸ್ತೆ ತಡೆ

By

Published : May 4, 2021, 10:26 AM IST

ಮಂಡ್ಯ:ಶ್ರೀರಂಗಪಟ್ಟಣದ ಕಾವೇರಿ‌ ನದಿಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಸ್ಥಿ ಬಿಡುತ್ತಿರುವುದನ್ನು ವಿರೋಧಿಸಿ ಗಂಜಾಂ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.

ಕಾವೇರಿ‌ ನದಿಗೆ ಕೋವಿಡ್​​ನಿಂದ ಮೃತಪಟ್ಟವರ ಅಸ್ಥಿ ಬಿಡುತ್ತಿರುವುದನ್ನು ವಿರೋಧಿಸಿ ರಸ್ತೆ ತಡೆ

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ ರಸ್ತೆಗೆ ಮರದ ತುಂಡುಗಳನ್ನು ಹಾಕಿ ರಸ್ತೆ ತಡೆದಿದ್ದಾರೆ. ಘೋಸಾಯ್ ಘಾಟ್, ಸಂಗಮದಲ್ಲಿ ಪ್ರತಿನಿತ್ಯ ಅಸ್ಥಿ ವಿಸರ್ಜನೆ ಮಾಡಲಾಗುತ್ತಿದೆ. ಆದರೆ, ಕಾವೇರಿ ನದಿಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಸ್ಥಿ ಬಿಡಬಾರದು. ಅಲ್ಲದೆ ಮೃತರ ಸಂಬಂಧಿಕರು ಇಲ್ಲಿಗೆ ಬರುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ.

ತಾಲೂಕು ಆಡಳಿತ ಕಾವೇರಿ‌ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಈಗಾಗಲೇ ನಿಷೇಧ ಹೇರಿದೆ. ಆದರೂ ಕೂಡ ಬೆಂಗಳೂರಿನಿಂದ ಇಲ್ಲಿಗೆ ಬಂದು ನೂರಾರು ಜನರು ಅಸ್ಥಿ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ:ಚಾಮರಾಜನಗರ ಜಿಲ್ಲಾಸ್ಪತ್ರೆಗಿಂದು ತನಿಖಾಧಿಕಾರಿ ಕಳಸದ್ ಭೇಟಿ

ABOUT THE AUTHOR

...view details