ಮಂಡ್ಯ: ಗಾಂಜಾ ಮಾರಾಟಗಾರನನ್ನು ನಾಗಮಂಗಲ ಪೊಲೀಸರು ಬಂಧಿಸಿದ್ದು, ಆತನಿಂದ 500 ಗ್ರಾಂ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆಯಲಾಗಿದೆ.
ಗಾಂಜಾ ಮಾರಾಟ: ನಾಗಮಂಗಲದಲ್ಲಿ ಒರ್ವನ ಬಂಧನ - ಮಂಡ್ಯ
ತಹಶೀಲ್ದಾರ್ ರೂಪ ಅವರ ನೇತೃತ್ವದಲ್ಲಿ ಡಿವೈಎಸ್ಪಿ ವಿಶ್ವನಾಥ್ ಮಾರ್ಗದರ್ಶನದಂತೆ ಪಟ್ಟಣ ಠಾಣೆ ಪಿಎಸ್ಐ ರವಿಕಿರಣ್ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು.
ಆರೋಪಿಯ ಬಂಧನ
ನಾಗಮಂಗಲ ಪಟ್ಟಣದ ಸುಭಾಸ್ ನಗರವಾಸಿ ಫರ್ಮಾನ್ (48) ಬಂಧಿತ ಆರೋಪಿ. ಪಟ್ಟಣದ ಮುಳುಕಟ್ಟೆ ರಸ್ತೆಯಲ್ಲಿ ವ್ಯಕ್ತಿಯೋರ್ವನಿಗೆ ಗಾಂಜಾ ಮಾರಲು ಹೊಂಚುಹಾಕುತ್ತಿದ್ದ ವೇಳೆ ತಹಶೀಲ್ದಾರ್ ರೂಪ ಅವರ ನೇತೃತ್ವದಲ್ಲಿ ಡಿವೈಎಸ್ಪಿ ವಿಶ್ವನಾಥ್ ಮಾರ್ಗದರ್ಶನದಂತೆ ಪಟ್ಟಣ ಠಾಣೆ ಪಿಎಸ್ಐ ರವಿಕಿರಣ್ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಈ ಸಂಬಂಧವಾಗಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಗಮಂಗಲ ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಆರೋಪಿ ಫರ್ಮಾನ್ನನ್ನು ಹಾಜರುಪಡಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.