ಕರ್ನಾಟಕ

karnataka

ETV Bharat / state

ಮಂಡ್ಯ: ಜೂಜಾಟ ನಡೆಯುತ್ತಿದ್ದ ಸ್ಪೋರ್ಟ್ ಕ್ಲಬ್ ಮೇಲೆ ದಾಳಿ; ₹18 ಲಕ್ಷ ವಶ - ಈಟಿವಿ ಭಾರತ ಕನ್ನಡ

ಜೂಜಾಟ ನಡೆಯುತ್ತಿದ್ದ ಸ್ಪೋರ್ಟ್ಸ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು 55 ಜನರ ವಿರುದ್ಧ ಕೇಸು ದಾಖಲಿಸಿ, 18 ಲಕ್ಷ ರೂ ಜಪ್ತಿ ಮಾಡಿದ್ದಾರೆ.

gambling-at-mandya-sports-club-18-lakh-seized-by-police
ಮಂಡ್ಯ : ಜೂಜಾಟ ನಡೆಯುತ್ತಿದ್ದ ಸ್ಪೋರ್ಟ್ ಕ್ಲಬ್ ಮೇಲೆ ದಾಳಿ ..18 ಲಕ್ಷ ರೂ ವಶ

By

Published : Mar 23, 2023, 9:27 AM IST

ಮಂಡ್ಯ :ಕಿರಗಂದೂರು ಗೇಟ್ ಬಳಿಯ ಸ್ಪೋರ್ಟ್ಸ್ ಕ್ಲಬ್​ವೊಂದರಲ್ಲಿ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಸುಮಾರು 18 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಓಂ ಪ್ರಕಾಶ್ ನೇತೃತ್ವದಲ್ಲಿ ಸಿಪಿಐ ಎಲ್.ಅರುಣ್, ಎಸ್‌ಐಗಳಾದ ದೀಕ್ಷಿತ್ ಹಾಗೂ ವರ್ಷಾ ಅವರ ತಂಡ ಕಾರ್ಯಾಚರಣೆ ನಡೆಸಿದೆ. 55 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಎಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ ಮಂಡ್ಯದಲ್ಲಿ ಜೂಜಾಟ ಎಗ್ಗಿಲ್ಲದೆ ನಡೆಯುತ್ತದೆ. ಜೂಜಾಡುವುದು ಕಾನೂನು ಬಾಹಿರ. ಇಂಥ ಕೃತ್ಯದಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಈ ಹಿಂದೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ :ಆನ್​ಲೈನ್ ಜೂಜು ಗೀಳು: ಸಾಲದ ಹೊರೆಗೆ ಹೆದರಿ ಯುವಕ ಆತ್ಮಹತ್ಯೆ

ABOUT THE AUTHOR

...view details