ಮಂಡ್ಯ: ಕಾವೇರಿಗೆ ಕೆಆರ್ಎಸ್ ಹಾಗೂ ಕಬಿನಿಯಿಂದ ನೀರು ಬಿಟ್ಟಿರುವುದರಿಂದ ಮಳವಳ್ಳಿ ತಾಲೂಕಿನ ಗಗನಚುಕ್ಕಿಗೆ ಜೀವಕಳೆ ಬಂದಿದೆ. ಈ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು. ಕಳೆದ ಒಂದು ವಾರದಿಂದ ತಮಿಳುನಾಡಿಗೆ ನೀರು ಹರಿಯುತ್ತಿರುವುದರಿಂದ ಜಲಪಾತ ಬೋರ್ಗೆರೆಯುತ್ತಿದೆ. ಈಗಾಗಲೇ ಪ್ರವಾಸಿಗರು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ.
ಗಗನಚುಕ್ಕಿಗೆ ಬಂತು ಜೀವಕಳೆ: ಪ್ರವಾಸಿಗರ ಮನದಲ್ಲಿ ಉಲ್ಲಾಸದ ಹೊಳೆ..! - Gaganachukki falls strats flowing,
ಪ್ರಕೃತಿಗೆ ಮಳೆಯ ಸಿಂಚನವಾಯಿತು ಎಂದರೆ ಸಾಕು ಅಲ್ಲಿ ಮೊದಲಿಗೆ ಚಿಗುರೊಡೆಯುವುದೇ ಹಸಿರು, ಸ್ವಲ್ಪ ಅತಿಯಾದರೆ ಮತ್ತಷ್ಟು ರಂಗು ಮೂಡುವಂತೆ ಅಲ್ಲಲ್ಲಿ ಧುಮ್ಮಿಕ್ಕಿ ಹರಿಯುತ್ತವೆ ಸುಂದರ ಹಾಲ್ನೋರೆಯ ಜಲಪಾತಗಳು, ಅದಕ್ಕೆ ಸರಿಯಾದ ನಿದರ್ಶನ ಎಂಬಂತೆ ಸಕ್ಕರೆ ಜಿಲ್ಲೆಯಲ್ಲಿರುವ ಗಗನ ಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುವ ಮೂಲಕ ಹಲವಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ನೋಡುಗರಿಗೆ ಮುದ ನೀಡುತ್ತಿದೆ.

ಸಕ್ಕರೆ ಜಿಲ್ಲೆಯಲ್ಲಿರುವ ಗಗನ ಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ
ಸಕ್ಕರೆ ಜಿಲ್ಲೆಯಲ್ಲಿರುವ ಗಗನ ಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ
ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದೆ ಈ ಗಗನಚುಕ್ಕಿ.
ಜಲಪಾತದ ವೈಭವ ನೋಡುತ್ತಿದ್ದಂತೆ ಎಂತಹ ರಸಿಕರ ಮನಸ್ಸಾದರೂ ಸರಿ ಮತ್ತಷ್ಟು ಉನ್ಮಾದಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಈಗೀಗ ಆಕಾಶದಿಂದಲೇ ಜಲಪಾತಕ್ಕೆ ನೀರು ಧುಮ್ಮಿಕ್ಕುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಇಲ್ಲಿಗೆ ಧಾವಿಸುತ್ತಿರುವ ಹಲವು ಸಹೃದಯರ ಮನಸ್ಸಿನಲ್ಲೇ ಕವನ ಗೀಚಿ ಕಾವೇರಿಯ ಸೊಬಗು ಸವಿಯುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.