ಮಂಡ್ಯ:ರಮೇಶ್ ಜಾರಕಿಹೊಳಿರವರನ್ನೇ ಯಾಕೆ ಟಾರ್ಗೆಟ್ ಮಾಡಿದ್ರು?, ಬೇರೆಯವರನ್ನು ಯಾಕೆ ಮಾಡಿಲ್ಲ? ಎಂದು ಸಿಡಿ ಪ್ರಕರಣದ ದೂರು ವಾಪಸ್ ಪಡೆದ ವಿಚಾರಕ್ಕೆ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ ಮಧ್ಯೆ ಏನೋ ಆಗಿರುತ್ತದೆ, ಕಂಪ್ಲೆಂಟ್ ಕೊಟ್ಟು ಯಾಕೆ ವಾಪಸ್ ಪಡೆದಿದ್ದಾರೆ? ಪ್ರಚಾರಕ್ಕೋಸ್ಕರ ಈ ರೀತಿ ಮಾಡಿ ರಾಜಕೀಯ ನಾಯಕರ ಭವಿಷ್ಯ ಹಾಳು ಮಾಡಿದ್ದಾರೆ ಎಂದು ಆಕ್ರೋಶಗೊಂಡರು.
ನಾವು ಸಾರ್ವಜನಿಕರಿಂದ ಆಯ್ಕೆಯಾದವರು. ಈ ತರಹದ ಸುಮಾರು ಟ್ರ್ಯಾಪ್ಗಳನ್ನು ನೋಡಿದ್ದೇವೆ. ನಾವು ಎಷ್ಟರ ಮಟ್ಟಿಗೆ ಇರಬೇಕೆಂದು ನಾವು ಅರ್ಥಮಾಡಿಕೊಳ್ಳಬೇಕು. ಇದೀಗ ರಮೇಶ್ ಜಾರಕಿಹೊಳಿಯನ್ನೇ ಟ್ರ್ಯಾಪ್ ಮಾಡಿದ್ದಾರೆ ಎಂದರು.