ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಮಾಚಗೋನಹಳ್ಳಿ ಗ್ರಾಮದ ನಿವಾಸಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಬಿ. ನಂಜಪ್ಪಗೌಡ (95) ಇಂದು ಕೊನೆಯುಸಿರೆಳೆದರು.
ಸ್ವಾತಂತ್ರ್ಯ ಹೋರಾಟಗಾರ ಎಂ.ಬಿ.ನಂಜಪ್ಪಗೌಡ ಇನ್ನಿಲ್ಲ - ಕೆಆರ್ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಮಾಚಗೋನಹಳ್ಳಿ
ಹಲವು ವರ್ಷಗಳಿಂದ ಮಂಡ್ಯದ ಸ್ವರ್ಣಸಂದ್ರದಲ್ಲಿ ವಾಸವಾಗಿದ್ದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು.
![ಸ್ವಾತಂತ್ರ್ಯ ಹೋರಾಟಗಾರ ಎಂ.ಬಿ.ನಂಜಪ್ಪಗೌಡ ಇನ್ನಿಲ್ಲ freedom-fighter-mb-nanjappa-gowda-death-mandya-news](https://etvbharatimages.akamaized.net/etvbharat/prod-images/768-512-10337486-thumbnail-3x2-jgh.jpg)
ಸ್ವಾತಂತ್ರ್ಯ ಹೋರಾಟಗಾರ ಎಂ.ಬಿ. ನಂಜಪ್ಪಗೌಡ ನಿಧನ
ಹಲವು ವರ್ಷಗಳಿಂದ ಮಂಡ್ಯದ ಸ್ವರ್ಣಸಂದ್ರದಲ್ಲಿ ವಾಸವಾಗಿದ್ದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಪ್ರಮೀಳಾ, ಮೂವರು ಪುತ್ರಿಯರು ಹಾಗು ಓರ್ವ ಪುತ್ರ ಸೇರಿದಂತೆ ಬಂಧು ವರ್ಗವನ್ನು ಅಗಲಿದ್ದಾರೆ.
ಸಚಿವ ನಾರಾಯಣ ಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ತಹಶೀಲ್ದಾರ್ ಚಂದ್ರಶೇಖರ್, ಬೂಕನಕೆರೆ ಹೋಬಳಿ ರಾಜಸ್ವ ನಿರೀಕ್ಷಕ ರಾಜಮೂರ್ತಿ ಸೇರಿದಂತೆ ಹಲವರು ಪಾರ್ಥಿವ ಶರೀರದ ದರ್ಶನ ಪಡೆದು ಸಂತಾಪ ಸೂಚಿಸಿದರು.