ಕರ್ನಾಟಕ

karnataka

ETV Bharat / state

ಮಂಡ್ಯ ಹಾಲು ಒಕ್ಕೂಟದಿಂದ ಹುತಾತ್ಮ ಯೋಧನ ಅಂತ್ಯಸಂಸ್ಕಾರಕ್ಕೆ ಉಚಿತ ತುಪ್ಪ - news kannada

ಹುತಾತ್ಮ ಯೋಧ ಗುರುವಿನ ಅಂತ್ಯ ಸಂಸ್ಕಾರಕ್ಕೆ ಬೇಕಾದ 25 ಕೆಜಿ ನಂದಿನಿ ತುಪ್ಪ, ಸಾರ್ವಜನಿಕರಿಗೆ 3 ಸಾವಿರ ಮಜ್ಜಿಗೆ ಪ್ಯಾಕೇಟ್, ಅಷ್ಟೇ ಪ್ರಮಾಣದ ಕುಡಿಯುವ ನೀರು ಪೂರೈಕೆ ಮಾಡಲು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮಂಡಳಿ ನಿರ್ಧಾರ ಮಾಡಿದೆ.

ಹುತಾತ್ಮ ಯೋಧ ಗುರುವಿನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವುದು.

By

Published : Feb 16, 2019, 1:47 PM IST

ಮಂಡ್ಯ: ಹುತಾತ್ಮ ಯೋಧ ಗುರುವಿನ ಅಂತ್ಯ ಸಂಸ್ಕಾರಕ್ಕೆ ನಂದಿನಿ ತುಪ್ಪವನ್ನು ಉಚಿತವಾಗಿ ನೀಡಲು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮಂಡಳಿ ನಿರ್ಧಾರ ಮಾಡಿದೆ. ಉಚಿತವಾಗಿ ತುಪ್ಪ, ಸಾರ್ವಜನಿಕರಿಗೆ ಮಜ್ಜಿಗೆ ಹಾಗೂ ನೀರನ್ನು ನೀಡಲು ಮುಂದಾಗಿದೆ.

ಹುತಾತ್ಮ ಯೋಧ ಗುರುವಿನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವುದು.

ಅಂತ್ಯ ಸಂಸ್ಕಾರಕ್ಕೆ ಬೇಕಾದ 25 ಕೆಜಿ ನಂದಿನಿ ತುಪ್ಪ, ಸಾರ್ವಜನಿಕರಿಗೆ 3 ಸಾವಿರ ಮಜ್ಜಿಗೆ ಪ್ಯಾಕೇಟ್, ಅಷ್ಟೇ ಪ್ರಮಾಣದ ಕುಡಿಯುವ ನೀರು ಪೂರೈಕೆ ಮಾಡಲಿದೆ. ಉಚಿತವಾಗಿ ಎಲ್ಲವನ್ನು ನೀಡಲು ಮಂಡಳಿ ನಿರ್ಧಾರ ಮಾಡಿದೆ ಎಂದು ಅಧ್ಯಕ್ಷ ಕದಲೂರು ರಾಮಕೃಷ್ಣ ತಿಳಿಸಿದರು.

ಸ್ಮಾರಕ ನಿರ್ಮಾಣಕ್ಕೆ ಜಾಗ ನಿಗದಿ: ಯೋಧನ ಅಂತ್ಯ ಸಂಸ್ಕಾರ ಹಾಗೂ ಸ್ಮಾರಕ ನಿರ್ಮಾಣಕ್ಕೆ ಮಳವಳ್ಳಿ-ಮದ್ದೂರು ಹೆದ್ದಾರಿ ಸಮೀಪವೇ ಜಾಗ ನಿಗದಿ ಮಾಡಲಾಗಿದೆ. ಒತ್ತುವರಿ ಮಾಡಲಾಗಿದ್ದ ಜಾಗದ ತೆರವು ಕಾರ್ಯಾಚರಣೆ ಮುಗಿದಿದ್ದು, ಅಂತ್ಯಸಂಸ್ಕಾರದ ಸಿದ್ಧತೆಯನ್ನು ಮಾಡಲಾಗುತ್ತಿದೆ.ಹೆದ್ದಾರಿ ಸಮೀಪವಿರುವ ಸರ್ಕಾರಿ ಜಾಗವನ್ನು ಜಿಲ್ಲಾಡಳಿತ ನೀಡಿದ್ದು, ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ.

ABOUT THE AUTHOR

...view details