ಮಂಡ್ಯ: ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುವ ಪ್ರಕರಣವೊಂದು ನಡೆದಿದೆ. ಪೆಟ್ರೋಲ್ ಬಂಕ್ ನೌಕರನ ಕುತ್ತಿಗೆಗೆ ಲಾಂಗ್ ಹಿಡಿದು, ದರೋಡೆ ಮಾಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಸೋಮನಹಳ್ಳಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಕುತ್ತಿಗೆಗೆ ಲಾಂಗ್ ಹಿಡಿದು ಸಿನಿಮಾ ಸ್ಟೈಲ್ಲ್ಲಿ ದರೋಡೆ: ವಿಡಿಯೋ ನೋಡಿ - undefined
ಎರಡು ಪಲ್ಸರ್ ಬೈಕ್ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಪೆಟ್ರೋಲ್ ಬಂಕ್ನಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಬೆಚ್ಚಿಬೀಳಿಸುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
![ಕುತ್ತಿಗೆಗೆ ಲಾಂಗ್ ಹಿಡಿದು ಸಿನಿಮಾ ಸ್ಟೈಲ್ಲ್ಲಿ ದರೋಡೆ: ವಿಡಿಯೋ ನೋಡಿ](https://etvbharatimages.akamaized.net/etvbharat/prod-images/768-512-3593653-thumbnail-3x2-chai.jpg)
ದರೋಡೆ
ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದುಷ್ಕರ್ಮಿಗಳ ಕೃತ್ಯ
ಗ್ರಾಮದ ಹೊರ ವಲಯದಲ್ಲಿರುವ ರಾಘವೇಂದ್ರ ಪೆಟ್ರೋಲ್ ಬಂಕ್ನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರದಿದ್ದು, ದರೋಡೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ರಾತ್ರಿ ಪೆಟ್ರೋಲ್ ಹಾಕಿಸಿಕೊಂಡ ನಾಲ್ವರು ಖದೀಮರು ಸಿಬ್ಬಂದಿಯಿಂದ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಎರಡು ಪಲ್ಸರ್ ಬೈಕ್ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳ ತಂಡ ಈ ಕೃತ್ಯವೆಸಗಿದೆ. ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.