ಕರ್ನಾಟಕ

karnataka

ETV Bharat / state

ನಿಮ್ಮ ವಿರುದ್ಧ ನಾನು ಸೋತರೆ ಶಿರಚ್ಛೇದನ ಮಾಡಿಕೊಳ್ಳುತ್ತೇನೆ : ಮಾಜಿ ಸಂಸದ ಶಿವರಾಮೇಗೌಡ - ಈಟಿವಿ ಭಾರತ ಕನ್ನಡ ನ್ಯೂಸ್

ಪಕ್ಷದಲ್ಲಿ ನಿಂತರೆ ಯಾರು ಬೇಕಾದರೂ ಗೆಲ್ಲುತ್ತಾರೆ. ಬನ್ನಿ ಪಕ್ಷೇತರರಾಗಿ ನಿಲ್ಲೋಣ. ನನ್ನ ವಿರುದ್ಧ ನೀವಿಬ್ಬರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದರೆ ನಾನು ಶಿರಚ್ಛೇದ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿಗೆ ಮಾಜಿ ಸಂಸದ ಎಲ್​ಆರ್​ ಶಿವರಾಮೇಗೌಡರು ಬಹಿರಂಗ ಸವಾಲು ಹಾಕಿದ್ದಾರೆ.

former-mp-shivarame-gowda-statement-at-mandya
ನಿಮ್ಮ ವಿರುದ್ಧ ನಾನು ಸೋತರೆ ಶಿರಚ್ಛೇದ ಮಾಡಿಕೊಳ್ಳುತ್ತೇನೆ : ಮಾಜಿ ಸಂಸದ ಶಿವರಾಮೇಗೌಡ

By

Published : Nov 16, 2022, 5:24 PM IST

ಮಂಡ್ಯ : ಈ ಬಾರಿಯ ಚುನಾವಣೆಯಲ್ಲಿ ನನ್ನ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ಒಂದು ವೇಳೆ ನಾನು ಸೋತರೆ ಶಿರಚ್ಛೇದನ ಮಾಡಿಕೊಳ್ಳುವುದಾಗಿ ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಸಚಿವ ಎನ್. ಚಲುವರಾಯಸ್ವಾಮಿಗೆ ಮಾಜಿ ಸಂಸದ ಎಲ್​ಆರ್​ ಶಿವರಾಮೇಗೌಡರು ಬಹಿರಂಗ ಸವಾಲು ಹಾಕಿದ್ದಾರೆ.

ನಾನು ಶಿರಚ್ಚೇಧನ ಮಾಡಿಕೊಳ್ಳುತ್ತೇನೆ : ನಾಗಮಂಗಲದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ನಾಗಮಂಗಲಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆದಿಯಾಗಿ ಯಾರೇ ಬಂದರೂ ಸುರೇಶ್ ಗೌಡ ಗೆಲ್ಲಲ್ಲ. ಪಕ್ಷದಲ್ಲಿ ನಿಂತರೆ ಯಾರು ಬೇಕಾದರೂ ಗೆಲ್ಲುತ್ತಾರೆ. ಬನ್ನಿ ಪಕ್ಷೇತರರಾಗಿ ನಿಲ್ಲೋಣ ಎಂದು ಬಹಿರಂಗ ಸವಾಲು ಹಾಕಿದರು. ನನ್ನ ವಿರುದ್ಧ ನೀವಿಬ್ಬರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದರೆ ನಾನು ಶಿರಚ್ಛೇದ ಮಾಡಿಕೊಳ್ಳುತ್ತೇನೆ ಎಂದರು.

ನಿಮ್ಮ ವಿರುದ್ಧ ನಾನು ಸೋತರೆ ಶಿರಚ್ಛೇದ ಮಾಡಿಕೊಳ್ಳುತ್ತೇನೆ : ಮಾಜಿ ಸಂಸದ ಶಿವರಾಮೇಗೌಡ

ನಾಗಮಂಗಲದಲ್ಲಿ ಜೆಡಿಎಸ್​ಗೆ ಸೋಲು: ಇನ್ನು ನೀವಿಬ್ಬರೂ ಪಕ್ಷ ಬಿಟ್ಟು ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಿ. ನಾಗಮಂಗಲದಲ್ಲಿ ಈ ಬಾರಿ ಸುರೇಶ್ ಗೌಡರೇ ಅಭ್ಯರ್ಥಿಯಾದರೆ ಖಂಡಿತಾ ಜೆಡಿಎಸ್ ಸೋಲುತ್ತದೆ ಎಂದು ಭವಿಷ್ಯ ನುಡಿದರು. ಹಿಂದೆ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಆಗಿತ್ತು ನಿಜ. ಆದರೆ, ಜಿಲ್ಲೆಯ ಕೆಲ ಭಟ್ಟಂಗಿಗಳ ದುರ್ವರ್ತನೆಯಿಂದ ಜೆಡಿಎಸ್ ಭದ್ರಕೋಟೆ ಸ್ವಲ್ಪ ಸ್ವಲ್ಪ ಕುಸಿಯುತ್ತಿದೆ. ನನಗೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಅವರುಗಳ ಬಗ್ಗೆ ಗೌರವ ಇದೆ ಎಂದು ಇದೇ ವೇಳೆ ಜೆಡಿಎಸ್​ ಉಚ್ಛಾಟನೆಗೊಂಡಿರುವ ಶಿವರಾಮೇಗೌಡ ಹೇಳಿದರು.

ಇದನ್ನೂ ಓದಿ :ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ.. ಜೆಡಿಎಸ್​ನಲ್ಲಿ ಗರಿಗೆದರಿದ ರಾಜಕೀಯ ಲೆಕ್ಕಾಚಾರ

ABOUT THE AUTHOR

...view details