ಮಂಡ್ಯ:ಸಿಎಂ ಯಡಿಯೂರಪ್ಪ ಮತ್ತು ಅನರ್ಹ ಶಾಸಕ ನಾರಾಯಣಗೌಡರ ನಡುವೆ ನಡೆದ ಡೀಲ್ ಬಗ್ಗೆ ನನ್ನ ಬಳಿ ಆಡಿಯೋ ಸಾಕ್ಷಿ ಇದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೊಸ ಆಡಿಯೋ ಬಾಂಬ್ ಸಿಡಿಸಿದ್ದಾರೆ.
ಬಿಎಸ್ವೈ-ನಾರಾಯಣಗೌಡ ನಡುವೆ ಡೀಲ್ ಆರೋಪ: ಹೊಸ ಆಡಿಯೋ ಬಾಂಬ್ ಸಿಡಿಸಿದ ಮಾಜಿ ಸಂಸದ - latest audio news which destroyed government
ಸಿಎಂ ಯಡಿಯೂರಪ್ಪ ಮತ್ತು ಅನರ್ಹ ಶಾಸಕ ನಾರಾಯಣಗೌಡರ ನಡುವೆ ಸರ್ಕಾರ ಬೀಳಿಸಲು ನಡೆದ ಡೀಲ್ ಬಗ್ಗೆ ನನ್ನ ಬಳಿ ಆಡಿಯೋ ಸಾಕ್ಷಿ ಇದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೊಸ ಆಡಿಯೋ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳ ಮುಂದೆ ಒಂದು ಪೆನ್ ಡ್ರೈವ್ ತೋರಿಸಿದ ಶಿವರಾಮೇಗೌಡ, ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆ ನಡೆಯಲಿ. ಹಣ ಪಡೆದಿಲ್ಲ, ಕೊಟ್ಟಿಲ್ಲ ಎಂದು ಯಡಿಯೂರಪ್ಪ ಮತ್ತು ನಾರಾಯಣಗೌಡ ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಲಿ ಎಂದರು.
ಮೊದಲು 5 ಕೋಟಿ ರೂಪಾಯಿಗೆ ಡೀಲ್ ನಡೆದಿತ್ತು. ನಂತರ ಒಪ್ಪದೇ ಇದ್ದಾಗ ಹೆಚ್ಚಿನ ಹಣಕ್ಕೆ ಡೀಲ್ ಮಾಡಿ ಸಮ್ಮಿಶ್ರ ಸರ್ಕಾರ ಬೀಳಿಸಿದರೆಂದು ಆರೋಪಿಸಿದರು. ಅಷ್ಟೇ ಅಲ್ಲದೇ, ಹೆಚ್ಡಿಕೆ ಕೊಟ್ಟ 8,500 ಕೋಟಿ ರೂಪಾಯಿ ಅನುದಾನವನ್ನು ತಡೆ ಹಿಡಿದಿದ್ದಾರೆ. ಇಲ್ಲವಾದರೆ ಸಿಎಂ ಆ ಅನುದಾನ ತಡೆ ಹಿಡಿದಿಲ್ಲ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.